Wednesday, 11th December 2024

ವಿಶ್ವಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರ

ನವದೆಹಲಿ: ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ, ಭಾರತ ಮೂಲದ ಅಜಯ್ ಬಂಗಾರ ಹೆಸರನ್ನು ವಿಶ್ವಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ವಾಷಿಂಗ್ಟನ್ ನಾಮನಿರ್ದೇಶನ ಮಾಡುವುದಾಗಿ ಯುಎಸ್‌ ಅಧ್ಯಕ್ಷ ಜೋ ಬೈಡೆನ್ ಹೇಳಿ ದ್ದಾರೆ.

ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾದ ಡೇವಿಡ್ ಮಾಲ್ಪಾಸ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬಳಿಕ ಯುಎಸ್‌ ಅಧ್ಯಕ್ಷ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡಿದ್ದಾರೆ.

“ಅಜಯ್‌ ಬಂಗಾ ಮೂರು ದಶಕಕ್ಕೂ ಅಧಿಕ ಸಮಯದಿಂದ ಜಾಗತಿಕವಾಗಿ ಉದ್ಯೋಗ ಸೃಷ್ಟಿ, ದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆ ಸೃಷ್ಟಿಸುವಲ್ಲಿ, ಹಲವಾರು ಬದಲಾವಣೆಗಳ ಮೂಲಕವೇ ಜಾಗತಿಕವಾಗಿ ಸಂಸ್ಥೆಗಳಿಗೆ ಮಾರ್ಗದರ್ಶನವನ್ನು ಯಶಸ್ವಿ ಯಾಗಿ ನೀಡುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಯ ಹೆಸರನ್ನು ವಾಷಿಂಗ್ಟನ್ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶಿಸು ತ್ತದೆ” ಎಂದಿದ್ದಾರೆ.

63 ವರ್ಷದ ಅಜಯ್ ಬಂಗಾ ಭಾರತೀಯ-ಅಮೇರಿಕನ್ ಆಗಿದ್ದಾರೆ. ಪ್ರಸ್ತುತ ಈಕ್ವಿಸಿ ಸಂಸ್ಥೆ ಯಾದ ಜನರಲ್ ಅಟ್ಲಾಟಿಕ್‌ನಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಪ್ರಸ್ತುತ ವಿಶ್ವಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಆಗಿದ್ದು, ತನ್ನ ಅವಧಿ ಪೂರ್ಣವಾಗುವುದಕ್ಕೂ ಮುನ್ನವೇ ಸ್ಥಾನವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ.

ಅಜಯ್‌ ಬಂಗಾ ಮಾಸ್ಟರ್‌ಕಾರ್ಡ್ ಮುಖ್ಯಸ್ಥರಾಗಿ ಮತ್ತು ಅಮೇರಿಕನ್ ರೆಡ್‌ ಕ್ರಾಸ್, ಕ್ರಾಫ್ಟ್ ಫುಡ್ಸ್ ಮತ್ತು ಡೌ ಇಂಕ್‌ನ ಮಂಡಳಿಗಳಲ್ಲಿಯೂ ಸೇವೆ ನೀಡಿದ್ದಾರೆ.