Tuesday, 5th November 2024

ಪ್ರಚೋದನಕಾರಿ ಭಾಷಣ: ಅಕ್ಬರುದ್ದೀನ್‌ ಬಂಧನ

#Akbaruddin Owaisi

ಲಖನೌ: ಪ್ರಚೋದನಕಾರಿ ಭಾಷಣ ಮಾಡಿದ 2 ಪ್ರಕರಣಗಳಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ಸೋದರ ಅಕ್ಬರುದ್ದೀನ್‌ ಅವರನ್ನು ಬಂಧಿಸಲಾಗಿದೆ.

ತೆಲಂಗಾಣ ಶಾಸಕ ಅಕ್ಬರುದ್ದೀನ್‌ ಓವೈಸಿ 2012ರಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ಅವರನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ 40 ಪ್ರತ್ಯಕ್ಷದರ್ಶಿಗಳ ಈಗಾಗಲೇ ವಿಚಾರಣೆ ನಡೆಸಲಾಗಿದೆ. ಈಗಾಗಲೇ ಅಕ್ಬರುದ್ದೀನ್‌ ಓವೈಸಿ 40 ದಿನಗಳ ಕಾಲ ಜೈಲುವಾಸ ಅನುಭವಿ ಸಿದ್ದು, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.