Friday, 13th December 2024

ಟಿನ್‌ ಶೆಡ್‌ ಮೇಲೆ ಬೃಹತ್‌ ಮರ ಉರುಳಿ 7 ಮಂದಿ ಸಾವು

ಕೋಲ (ಮಹಾರಾಷ್ಟ್ರ): ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆ ಯಲ್ಲಿನ ದೇವಾಲಯದ ಆವರಣದಲ್ಲಿದ್ದ ಟಿನ್‌ ಶೆಡ್‌ ಮೇಲೆ ಬೃಹತ್‌ ಮರ ಉರುಳಿ ಬಿದ್ದಿದ್ದು, ಆಶ್ರಯ ಪಡೆದಿದ್ದ 7 ಮಂದಿ ಮೃತಪಟ್ಟಿದ್ದಾರೆ.

ಬಾಲಾಪುರ್‌ ತಾಲ್ಲೂಕಿನ ಪರಾಸ್‌ ಹಳ್ಳಿಯಲ್ಲಿರುವ ಬಾಬುಜಿ ಮಹಾರಾಜ್‌ ದೇವಾಲಯ ದಲ್ಲಿ ದುರಂತ ಸಂಭವಿಸಿದ್ದು, ಈ ಬಗ್ಗೆ ಸ್ಥಳೀಯ ಆಡಳಿತ ಸೋಮವಾರ ಮಾಹಿತಿ ನೀಡಿದೆ.

ಪೂಜಾ ಕಾರ್ಯಕ್ರಮದ ಸಲುವಾಗಿ ಜನರು ದೇವಾಲಯಕ್ಕೆ ಆಗಮಿಸಿದ್ದರು. ಶತಮಾನ ದಷ್ಟು ಹಳೆಯ ಮರ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಟಿನ್‌ ಶೆಡ್‌ ಮೇಲೆ ಬಿದ್ದಿದೆ. 40 ಜನರು ಅಲ್ಲಿ ಆಶ್ರಯ ಪಡೆದಿದ್ದರು. ಈ ಪೈಕಿ 7 ಮಂದಿ ಮೃತಪಟ್ಟು, 23 ಜನರು ಗಾಯ ಗೊಂಡಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ರಕ್ಷಣಾ ಕಾರ್ಯಾ ಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಅಕೋಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.