Friday, 13th December 2024

ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ ಸಿದ್ದ

ಅಲಿಗಢ: ಅಲಿಗಢದ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿ ತೂಕದ ಬೀಗ ತಯಾರಿಸಿದ್ದಾರೆ. ಇವರು ಸ್ವತಃ ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿ.
ಅಯೋಧ್ಯೆಯ ರಾಮಮಂದಿರ ಮುಂದಿನ ವರ್ಷ ಜನವರಿಯಲ್ಲಿ ಭಕ್ತರ ದರ್ಶನಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.
ಭಗವಾನ್ ರಾಮನ ಕಟ್ಟಾ ಭಕ್ತ ಕುಶಲಕರ್ಮಿ ಸತ್ಯ ಪ್ರಕಾಶ್ ಶರ್ಮಾ ಅವರು, ಈ ವರ್ಷದ ಕೊನೆಯಲ್ಲಿ ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು “ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಲಾಕ್” ಅನ್ನು ತಯಾರಿ ಸಲು ತಿಂಗಳುಗಟ್ಟಲೆ ಶ್ರಮಿಸಿದ್ದಾರೆ.
ಶರ್ಮಾ ಅವರು ಕುಟುಂಬವು ಒಂದು ಶತಮಾನಕ್ಕೂ ಹೆಚ್ಚು ಕಾಲ ಕೈಯಿಂದ ಮಾಡಿದ ಬೀಗಗಳ ತಯಾರಿಕೆ ಯಲ್ಲಿ ತೊಡಗಿಸಿಕೊಂಡಿದೆ.
ಶರ್ಮಾ ಅವರು ಕಳೆದ 45 ವರ್ಷಗಳಿಂದ ತಾಲಾ ನಗರಿ ಅಥವಾ ಬೀಗಗಳ ನಗರ ಎಂದು ಕರೆಯಲ್ಪಡುವ ಅಲಿಗಢದಲ್ಲಿ ಬೀಗಗಳನ್ನು ತಯಾರಿಸುತ್ತಿದ್ದಾರೆ. ಈಗ ರಾಮಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ, 4.5 ಅಡಿ ಅಗಲ, 9.5 ಇಂಚು ದಪ್ಪವಿರುವ ಈ ದೈತ್ಯ ಬೀಗವನ್ನು ನಾಲ್ಕು ಅಡಿ ಕೀಲಿಯೊಂದಿಗೆ ಸ್ವಂತ ಹಣದಿಂದ ನಿರ್ಮಿಸಿದ್ದಾರೆ. ಈ ಬೀಗ ತಯಾರಿಸಲು ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದ್ದಾರೆ.