Monday, 9th December 2024

ಅಮರನಾಥ ಯಾತ್ರೆ ರದ್ದು

ನವದೆಹಲಿ: ಅಮರನಾಥ ಯಾತ್ರಿಕರಿಗೆ ಕಹಿ ಸುದ್ದಿ. ಈ ಬಾರಿಯೂ ಕರೋನಾ ಸೋಂಕಿನ 3ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆ ರದ್ದುಗೊಳಿಸಲು ಜಮ್ಮು ಕಾಶ್ಮೀರಾ ಸರ್ಕಾರ ನಿರ್ಧರಿಸಿದೆ.

ಹಿಮಾಲಯದಲ್ಲಿ  3,880 ಮೀಟರ್ ಎತ್ತರದಲ್ಲಿರುವ ಶಿವನ ಗುಹೆ ದೇವಸ್ಥಾನಕ್ಕೆ 56 ದಿನಗಳ ಪ್ರಯಾಣವು ಜೂ.28 ರಂದು ಪಹಲ್ಗಮ್ ಮತ್ತು ಬಾಲ್ಟಾಲ್ ಮಾರ್ಗಗಳ ಮೂಲಕ ಪ್ರಾರಂಭವಾಗಿ ಆಗಸ್ಟ್ 22 ರಂದು ಕೊನೆಗೊಳ್ಳಬೇಕಿತ್ತು.