Wednesday, 11th December 2024

ಅಮರನಾಥ ಯಾತ್ರೆ ಪುನರಾರಂಭ

ಶ್ರೀನಗರ: ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀ ರದ ಪಂಜತರ್ನಿ, ಶೇಷನಾಗ್ ಶಿಬಿರ ಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸತತ ಮೂರನೇ ದಿನವಾದ ಭಾನುವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದರಿಂದ ಅಧಿಕಾರಿಗಳು ಭಾನುವಾರ ಜಮ್ಮು ಬೇಸ್ ಕ್ಯಾಂಪ್‌ನಲ್ಲಿ ಭಕ್ತರ ಗುಂಪನ್ನು ತಡೆದಿದ್ದರು. ಯಾತ್ರೆ ಯನ್ನು ಸ್ಥಗಿತಗೊಳಿಸಿದ ನಂತರ 6 ಸಾವಿರ ಅಮರನಾಥ ಯಾತ್ರಾರ್ಥಿಗಳು ರಾಂಬನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಗುಹೆಯಿಂದ 6 ಕಿ.ಮೀ ದೂರದಲ್ಲಿರುವ ಪಂಚ ತಾರ್ಣಿಯಲ್ಲಿ ಕರ್ನಾಟಕದ ಕನಿಷ್ಠ 80 ಜನರು ಸಿಲುಕಿಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರ ಶನಿವಾರ ತಿಳಿಸಿತ್ತು.

“ಅಮರನಾಥ ಯಾತ್ರೆಯನ್ನು ಪ್ರತಿಕೂಲ ಹವಾಮಾನದಿಂದಾಗಿ ಶನಿವಾರ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರಿಗೆ ಇಲ್ಲಿನ ಯಾತ್ರಿ ನಿವಾಸದಲ್ಲಿ ನಾವು ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾವು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಡೆಪ್ಯೂಟಿ ಕಮಿಷನರ್ ರಾಂಬನ್ ಮುಸ್ಸರತ್ ತಿಳಿಸಿದ್ದರು.