ಅಮೆಜಾನ್ ಇಂಡಿಯಾದಲ್ಲಿ ತನ್ನ ಉದ್ಯೋಗಪಡೆಯಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವುದಕ್ಕೆ ಸತತ ಆದ್ಯತೆ ನೀಡುತ್ತಿದ್ದು ಇದರಲ್ಲಿ ವಿಶಿಷ್ಟ ದೃಷ್ಟಿಕೋನಗಳಿಗೆ ಮೌಲ್ಯ ನೀಡಲಾಗುತ್ತದೆ ಮತ್ತು ಸ್ವಾಗತಿಸಲಾಗುತ್ತದೆ. ಕಂಪನಿಯು ಪ್ರಗತಿಗೆ ಪೂರಕ ಸಂಸ್ಕೃತಿ ಉತ್ತೇಜಿಸುತ್ತದೆ ಮತ್ತು ಜನರಿಗೆ ಅವರ ಪೂರ್ಣ ಸಾಮರ್ಥ್ಯ ಕಂಡುಕೊಳ್ಳಲು ಸಮಾನ ಅವಕಾಶಗಳನ್ನು ನೀಡುವುದಲ್ಲದೆ ಅವರಿಗೆ ಹೆಚ್ಚಿನ ಕೆಲಸ ಮಾಡಲು ಸಬಲೀಕರಿಸುತ್ತದೆ. ಅವಕಾಶಗಳು ಮತ್ತು ಸಂಪನ್ಮೂಲಗಳಿಗೆ ಸುಲಭ ಲಭ್ಯತೆ ನೀಡುವ ಕಂಪನಿಯ ಬದ್ಧತೆಯು ಎಲ್ಲ ಸಮುದಾಯಗಳಿಗೆ ಹರಡಿದ್ದು ಅದರಲ್ಲಿ ಮಹಿಳೆಯರು, ಎಲ್.ಜಿ.ಬಿ.ಟಿ.ಕ್ಯೂ.ಐ.ಎ+, ಸೇನಾ ನಿವೃತ್ತರು ಮತ್ತು ವಿಶೇಷ ಚೇತನರು ಅಲ್ಲದೆ ವಿವಿಧ ಹಿನ್ನೆಲೆಗಳು, ಪ್ರದೇಶಗಳು ಮತ್ತು ಸಾಮಾಜಿಕ ಸ್ತರಗಳನ್ನು ಒಳಗೊಂಡಿದ್ದು ಅವರಿಗೆ ತಮ್ಮ ದಿಗಂತಗಳನ್ನು ವಿಸ್ತರಿಸಿಕೊಳ್ಳಲು ಅವಕಾಶ ನೀಡುತ್ತದೆ. ಕಳೆದ ಕೆಲ ವರ್ಷಗಳಿಂದ ಅಮೆಜಾನ್ ಇಂಡಿಯಾ ತನ್ನ ಉದ್ಯೋಗಪಡೆಯಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ ತರಲು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ.
ಆಗಸ್ಟ್ 2019ರಲ್ಲಿ ಅಮೆಜಾನ್ ಇಂಡಿಯಾ ಮಿಲಿಟರಿ ವೆಟರನ್ಸ್ ಎಂಪ್ಲಾಯ್ ಮೆಂಟ್ ಪ್ರೋಗ್ರಾಮ್ ಪ್ರಾರಂಭಿಸಿದ್ದು ಸೇನಾ ನಿವೃತ್ತರಿಗೆ ಮತ್ತು ಅವರ ಸಂಗಾತಿಗಳಿಗೆ ನೂರಾರು ಉದ್ಯೋಗಾವಕಾಶಗಳನ್ನು ಭಾರತದಾದ್ಯಂತ ಕಂಪನಿಯ ಫುಲ್ ಫಿಲ್ ಮೆಂಟ್ ಜಾಲದಲ್ಲಿ ಸೃಷ್ಟಿಸಿದೆ. ಇದನ್ನು ಆರ್ಮಿ ವೆಲ್ ಫೇರ್ ಪ್ಲೇಸ್ ಮೆಂಟ್ ಆರ್ಗನೈಸೇಷನ್ (AWPO) ಸಹಯೋಗದಲ್ಲಿ ನಡೆಸಲಾಗುತ್ತಿದ್ದು ಭಾರತದಾದ್ಯಂತ ಸೇನಾ ನಿವೃತ್ತರಿಗೆ ಮತ್ತು ಅವರ ಕುಟುಂಬ ಗಳಿಗೆ ಮುಂದುವರಿದ ಉದ್ಯೋಗಾಕಾಶಗಳನ್ನು ಸೃಷ್ಟಿಸುತ್ತಿದೆ. ಬಹಳ ಇತ್ತೀಚೆಗೆ ಅಮೆಜಾನ್ ಇಂಡಿಯಾ ಭಾರತದಲ್ಲಿ ಡೈರೆಕ್ಟೊರೇಟ್ ಆಫ್ ಜನರಲ್ ಪ್ಲೇಸ್ ಮೆಂಟ್(DGR) ಜೊತೆಯಲ್ಲಿ ಒಡಂಬಡಿಕೆ(MoU) ನವೀಕರಿಸಿ ತನ್ನ ವೃದ್ಧಿಸುತ್ತಿರುವ ಕಾರ್ಯಾಚರಣೆಯ ಜಾಲದಲ್ಲಿ ಸೇನಾ ನಿವೃತ್ತರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಸದೃಢಗೊಳಿಸಿದೆ. ಡಿಜಿಆರ್ ನೊಂದಿಗೆ ಈ ಒಡಂಬಡಿಕೆಯು ಅಮೆಜಾನ್ ಇಂಡಿಯಾಗೆ ಸೇನಾ ನಿವೃತ್ತರ ಬಳಸಿಕೊಳ್ಳದ ಸಾಮರ್ಥ್ಯ ಬಳಸಿಕೊಳ್ಳಲು ಅವಕಾಶ ನೀಡುತ್ತಿದ್ದು ಹೆಚ್ಚಿನ ಪ್ರತಿಭೆಗಳನ್ನು ಅದಕ್ಕೆ ನೀಡುತ್ತದೆ.
ಈ ಒಡಂಬಡಿಕೆಯಿಂದ ಅಮೆಜಾನ್ ಇಂಡಿಯಾ ಐಸಿಜಿಯೊಂದಿಗೆ ಸಹಯೋಗ ಹೊಂದಿದ್ದು ಸೇನಾ ಹಿನ್ನೆಲೆಯ ನಿವೃತ್ತ ಸೇನಾ ವೃತ್ತಿಪರರಿಗೆ ಅವರ ಕಾರ್ಪೊರೇಟ್ ವೃತ್ತಿಗಳನ್ನು ಅಮೆಜಾನ್ ಅಥವಾ ಇತರೆ ಕಾರ್ಪೊರೇಟ್ ಉದ್ಯೋಗಗಳನ್ನು ಪಡೆದುಕೊಳ್ಳಲು ನೆರವಾಗುವ ಸಾಮಾನ್ಯ ಗುರಿಗೆ ಕೆಲಸ ಮಾಡುತ್ತಿದೆ.
“ಅಮೆಜಾನ್ ನಲ್ಲಿ ನಾವು ನಮ್ಮ ಉದ್ಯೋಗದ ಸ್ಥಳದಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಸದೃಢಗೊಳಿಸುವ ನಮ್ಮ ಪ್ರಯತ್ನಗಳಿಗೆ ಬಹಳ ವಿನೀತರಾಗಿದ್ದೇವೆ. ಸೇನಾ ನಿವೃತ್ತರು ಹೊಂದಿರುವ ಅಪಾರ ಅನುಭವ ಮತ್ತು ವಿಶಿಷ್ಟ ದೃಷ್ಟಿಕೋನದ ಆಳವಾದ ಶ್ಲಾಘನೆಯೊಂದಿಗೆ ಅಮೆಜಾನ್ ಮಿಲಿಟರಿ ವೆಟರನ್ಸ್ ಎಂಪ್ಲಾಯ್ ಮೆಂಟ್ ಪ್ರೋಗ್ರಾಮ್ ಅನ್ನು ಜಾಗತಿಕವಾಗಿ ನಡೆಸುತ್ತಿದೆ. ಈ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಭಾರತೀಯ ಕರಾವಳಿ ಪಡೆಯೊಂದಿಗೆ ನಮ್ಮ ಸೇನಾ ನಿವೃತ್ತರು ಮತ್ತು ಅವರ ಕುಟುಂಬಗಳಿಗೆ ಅರ್ಥಪೂರ್ಣ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಸಾಮಾನ್ಯ ಗುರಿಯತ್ತ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಸೇನಾ ನಿವೃತ್ತರ ಅಪಾರ ಅನುಭವವನ್ನು ಬಳಸಿಕೊಳ್ಳುವು ದನ್ನು ಮುಂದುವರಿಸಲಿದ್ದು ಅದು ಅಮೆಜಾನ್ ಗೆ ಸರಿಸಾಟಿ ಇಲ್ಲದ ಸೇರ್ಪಡೆಯಾಗಿದೆ” ಎಂದು ಅಮೆಜಾನ್ ಇಂಡಿಯಾ, ಜಪಾನ್ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್ ನ ಪೀಪಲ್ ಎಕ್ಸ್ ಪೀಪಲ್ ಎಕ್ಸ್ ಪೀರಿಯೆನ್ಸ್ ವಿ.ಪಿ. ದೀಪ್ತಿ ವರ್ಮಾ ಹೇಳಿದರು.
ಇಂಡಿಯನ್ ಕೋಸ್ಟ್ ಗಾರ್ಡ್ “ನಮ್ಮ ಸೇನಾ ನಿವೃತ್ತರ ಅಪಾರ ಅನುಭವವನ್ನು ವಿಸ್ತಾರ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಪಾರ ಯಶಸ್ಸು ಗಳಿಸಬಹುದು. ಅಮೆಜಾನ್ ಇಂಡಿಯಾ ಸೇನಾ ನಿವೃತ್ತರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಕ್ರಿಯಾಶೀಲ ಹೆಜ್ಜೆಗಳನ್ನು ಇರಿಸಿದೆ. ಈ ಒಡಂಬಡಿಕೆಯು ಮಹತ್ತರ ಮೈಲಿಗಲ್ಲಾಗಿದ್ದು ನಾವು ಇದರಲ್ಲಿ ಹಂಚಿಕೊಂಡ ಗುರಿಗಾಗಿ ಒಗ್ಗೂಡಿದ್ದೇವೆ: ಇಂಡಿಯನ್ ಕೋಸ್ಟ್ ಗಾರ್ಡ್ ನ ನಿವೃತ್ತ ಸೇನಾ ಸಿಬ್ಬಂದಿಗೆ ಅರ್ಥಪೂರ್ಣ ಉದ್ಯೋಗಗಳನ್ನು ಒದಗಿಸುವುದು”ಎಂದರು.
ಈ ಒಡಂಬಡಿಕೆಯಿಂದ ಅಮೆಜಾನ್ ಇಂಡಿಯಾ ಐಸಿಜಿಯೊಂದಿಗೆ ಸಹಯೋಗ ಹೊಂದಿದ್ದು ಸೇನಾ ಹಿನ್ನೆಲೆಯ ನಿವೃತ್ತ ಸೈನಿಕರಿಗೆ ಅಮೆಜಾನ್ ನಲ್ಲಿ ಅವಕಾಶಗಳು ಅಥವಾ ಇತರೆ ಕಾರ್ಪೊರೇಟ್ ಹುದ್ದೆಗಳ ಮೂಲಕ ಅವರ ಕಾರ್ಪೊರೇಟ್ ವೃತ್ತಿಯ ಅನ್ವೇಷಣೆಗೆ ನೆರವಾಗುತ್ತದೆ.