Wednesday, 11th December 2024

2,300 ಅಮೆಜಾನ್ ಉದ್ಯೋಗಿಗಳ ಕಡಿತ

ಸಿಯಾಟಲ್: ಬೃಹತ್ ಕಂಪನಿಗಳು ಉದ್ಯೋಗಿಗಳನ್ನು ಕಡಿತಗೊಳಿಸಿ ಶಾಕ್ ನೀಡುತ್ತಿರುವ ಹೊತ್ತಲ್ಲೇ ಅಮೆಜಾನ್ ತನ್ನ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿದೆ.

ಅಮೆಜಾನ್ ಸಿಯಾಟಲ್ ಪ್ರದೇಶದಲ್ಲಿ ಕನಿಷ್ಠ 2,300 ಅಮೆಜಾನ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಸಿಯಾಟಲ್‌ ನಲ್ಲಿ 1,852 ಮತ್ತು ವಾಷಿಂಗ್ಟನ್‌ನ ಬೆಲ್ಲೆವ್ಯೂನಲ್ಲಿ 448 ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ನೋಟಿಸ್ ಹೇಳಿದೆ.

ಜಾಗತಿಕವಾಗಿ ಸುಮಾರು 18,000 ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ವಜಾಗೊಳಿಸುವಿಕೆಯು ಮಾರ್ಚ್ 19 ರಿಂದ ಪ್ರಾರಂಭವಾಗುತ್ತದೆ. ನವೆಂಬರ್‌ನಲ್ಲಿ, ಅಮೆಜಾನ್ ತನ್ನ ಮೊದಲ ಸುತ್ತಿನ ವಜಾಗಳನ್ನು ಪ್ರಾರಂಭಿಸಿತು.

ಮೈಕ್ರೋಸಾಫ್ಟ್ ಬುಧವಾರ ಸುಮಾರು 10,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.