Wednesday, 11th December 2024

ಅಮೆಜಾನ್‌ ನೆರವಿನಿಂದ ಕುಟುಂಬ ಹಾಗೂ ಉದ್ಯಮ ಸಮತೋಲನ ಸಾಧಿಸಿರುವ ಉದ್ಯಮಶೀಲ ಮಹಿಳೆಯ ಯಶೋಗಾಥೆ

ಈ ಅಮ್ಮಂದಿರ ದಿನ, ನಾವು ಅನಿತಾ ಅವರಂತಹ ತಾಯಂದಿರ ಸಾಮರ್ಥ್ಯ ಹಾಗೂ ಕೌಟುಂಬಿಕ ಪ್ರೀತಿಯ ಸಂಭ್ರಮ ಆಚರಿಸುತ್ತೇವೆ. ಗೃಹಿಣಿಯಿಂದ ಯಶಸ್ವಿ ಉದ್ಯಮಿಯಾಗುವ ಹಾದಿಯಲ್ಲಿನ ಅವರ ಯಶಸ್ಸಿನ ಪಯಣವು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ. ಅನಿತಾ ಅವರಲ್ಲಿ ಉಲನ್‌ ಹೆಣಿಕೆ, ಹೊಲಿಗೆ ಮತ್ತು ಕೈಯಿಂದ ಮಾಡಿದ ವಸ್ತುಗಳನ್ನು ತಯಾರಿಸುವ ಉತ್ಸಾಹವು ಮೊದಲಿನಿಂದಲೂ ಮನೆಮಾಡಿತ್ತು.

ಅನಿತಾ ಅವರ ಉದ್ಯಮಶೀಲತೆಯ ಯಶೋಗಾಥೆಯು ಅವರ ಮಗಳ ಸರಳವಾದ ಪ್ರಶ್ನೆಯೊಂದಿಗೆ ಪ್ರಾರಂಭವಾಗಿತ್ತು. “ಅಮ್ಮಾ ನೀನು ಭವಿಷ್ಯದಲ್ಲಿ ಬದಲಾಯಿಸಬಹುದಾದ ಅಥವಾ ವಿಭಿನ್ನವಾಗಿ ಮಾಡಬಹುದಾದ ಯಾವುದಾದರೂ ಸಂಗತಿ ಇದ್ದರೆ ಅದು ಏನಾಗಿರಬಹುದು?” ಎಂಬ ಮಗಳ ಪ್ರಶ್ನೆಯು ಅನಿತಾ ಅವರಲ್ಲಿ ಹೊಸ ಉತ್ಸಾಹವನ್ನು ಬಡಿದೆಬ್ಬಿಸಿತು. ಆರ್ಥಿಕವಾಗಿ ಸ್ವತಂತ್ರವಾಗಿ ಕೆಲಸ ಮಾಡುವ ಮಹಿಳೆಯಾಗಬೇಕು ಎನ್ನುವ ಬಹುಕಾಲದ ಕನಸು ಅವರಲ್ಲಿತ್ತು. ಆ ಕನಸು ನನಸಾಗಲು ಮಗಳ ಪ್ರಶ್ನೆ ಮುನ್ನುಡಿ ಬರೆದಿತ್ತು. ತಮ್ಮ ಮಕ್ಕಳ ಬೆಂಬಲದ ನೆರವಿನಿಂದ ಅನಿತಾ ಅವರು ತಮ್ಮಲ್ಲಿನ ಕಲಾತ್ಮಕ ಪ್ರತಿಭೆಯನ್ನು ಬಾಹ್ಯ ಜಗತ್ತಿಗೆ ಪ್ರದರ್ಶಿಸುವ ಮೂಲಕ ಉಲನ್‌ ಹೆಣಿಕೆ ಮತ್ತು ಹೊಲಿಗೆಯ ತಮ್ಮಲ್ಲಿನ ಉತ್ಸಾಹವನ್ನು ಉದ್ಯಮ ವಾಗಿ ಪರಿವರ್ತಿಸಲು ದೃಢ ನಿರ್ಧಾರ ಕೈಗೊಂಡರು.

ಅಮೆಜಾನ್ ಕಾರಿಗಾರ್ ಕಾರ್ಯಕ್ರಮದ ಅನ್ವೇಷಣೆ: ಕೈಯಿಂದ ಮಾಡಿದ ಕನಸುಗಳಿಗೆ ವೇದಿಕೆ

ಕರಕುಶಲ ಬಟ್ಟೆ ಹಾಗೂ ಹೆಣಿಕೆ ಉತ್ಪನ್ನಗಳಿಗಾಗಿ ಇ-ಕಾಮರ್ಸ್‌ ತಾಣ ʼಡೆಕೊರ್‌ ಡಿಲ್‌ʼನಲ್ಲಿ (DecorDill) ವಹಿವಾಟು ಆರಂಭಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪುವುದು ಹೇಗೆ ಎನ್ನುವ ಪ್ರಶ್ನೆ ಅವರ ಎದುರಿಗೆ ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಅನಿತಾ ಅವರಂತಹ ಮಹಿಳೆಯರ ನೆರವಿಗಾಗಿಯೇ ಅಮೆಜಾನ್ ಕಾರಿಗರ್ ಪ್ರೋಗ್ರಾಂ (Amazon Karigar program) ರೂಪಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನಿರ್ದಿಷ್ಟವಾಗಿ ಇಂತಹ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಅನಿತಾ ಅವರ ಸೊಗಸಾದ ಉಣ್ಣೆಯ ಹೆಣಿಕೆ ಮತ್ತು ಹೊಲಿಗೆ ಕೌಶಲಗಳನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆಯನ್ನು ಒದಗಿಸಿತು. ಅಮೆಜಾನ್‌ ಬೆಂಬಲದ ಮೂಲಕ, ಅವರು ಉತ್ಪನ್ನ ಪಟ್ಟಿ, ಪ್ಯಾಕೇಜಿಂಗ್ ಮತ್ತು ಆನ್‌ಲೈನ್ ಮಾರುಕಟ್ಟೆಯಲ್ಲಿ ಅತ್ಯಮೂಲ್ಯವಾದ ತರಬೇತಿ ಪಡೆದುಕೊಂಡರು. ತಮ್ಮಲ್ಲಿನ ಉದ್ಯಮಶೀಲತೆಯ ಉತ್ಸಾಹವನ್ನು ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವಾಗಿ ಪರಿವರ್ತಿಸಿದರು. ಅನಿತಾ ಅವರ ಉದ್ಯಮಶೀಲತೆಯ ಬಹುದೊಡ್ಡ ಶಕ್ತಿ ಹಾಗೂ ಸ್ಫೂರ್ತಿಯು ಅವರ ಮಕ್ಕಳಿಂದಲೇ ಬಂದಿದೆ. ಮಕ್ಕಳು ತಮ್ಮ ತಾಯಿಯ ಈ ದೀರ್ಘಾವಧಿಯ ಕನಸನ್ನು ಮುಂದುವರಿಸಲು ಉತ್ತೇಜನ ನೀಡಿದರು. ಅಮೆಜಾನ್ ಕಾರಿಗಾರ್ ಪ್ರೋಗ್ರಾಂ ಮತ್ತು ಅವರ ಕುಟುಂಬದ ಸಂಘಟಿತ ಬೆಂಬಲದ ನೆರವಿನಿಂದ ಅನಿತಾ ಅವರು ಆನ್‌ಲೈನ್‌ ವಹಿವಾಟಿನ ಮಾರಾಟ ತಂತ್ರಗಳನ್ನು ಕರಗತ ಮಾಡಿಕೊಂಡರು. ಆನ್‌ಲೈನ್ ಮಾರಾಟದ ಸೂಕ್ಷ್ಮ ಸಂಗತಿಗಳಲ್ಲಿ ಪರಿಣತಿ ಸಾಧಿಸಿದರು. ಅಮೆಜಾನ್‌ನಲ್ಲಿ ತಮ್ಮ ಉತ್ಪನ್ನಗಳ ವಹಿವಾಟನ್ನು ಯಶಸ್ವಿಯಾಗಿ ಪ್ರಾರಂಭಿಸಿದರು. ಅಮೆಜಾನ್‌ ಕಾರಿಗಾರ್‌ ಕಾರ್ಯಕ್ರಮವು ಅನಿತಾ ಅವರ ಉದ್ಯಮದಲ್ಲಿ ಗಮನಾರ್ಹ ಬದಲಾವಣೆ ತಂದಿರುವುದು ಸಾಬೀತಾಯಿತು. ಅನಿತಾ ಅವರ ಕರಕುಶಲ ಸಂಪತ್ತನ್ನು ಪ್ರದರ್ಶಿಸಲು ಮತ್ತು ಹವ್ಯಾಸವನ್ನು ವೃತ್ತಿಯಾಗಿ ಪರಿವರ್ತಿಸಲು ಆದರ್ಶ ವೇದಿಕೆಯೊಂದನ್ನು ಒದಗಿಸಿತು.

ಮಕ್ಕಳ ಬೆಂಬಲ ಇರದಿದ್ದರೆ ಇ-ಕಾಮರ್ಸ್‌ ತಾಣ ʼಡೆಕೊರ್‌ಡಿಲ್‌ʼನಲ್ಲಿನ ಅನಿತಾ ಅವರ ಉದ್ಯಮಶೀಲತೆಯು ಯಶೋಗಾಥೆಯಲ್ಲಿ ಸಾಗುತ್ತಿರಲಿಲ್ಲ. ಮಕ್ಕಳು ಅಮ್ಮನ ವ್ಯಾಪಾರದ ಪ್ರತಿಯೊಂದು ಸಂಗತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ವಹಿವಾಟು ಹೆಚ್ಚಿಸಲು ಹೊಸ ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವುದರ ಜೊತೆಗೆ ತಮ್ಮ ತಾಯಿಯ ಸಾಮರ್ಥ್ಯಗಳಲ್ಲಿ ಅಚಲವಾದ ನಂಬಿಕೆಯನ್ನೂ ಇರಿಸುತ್ತಾರೆ. ಪ್ಯಾಕೇಜಿಂಗ್ ಮತ್ತು ಖರೀದಿ ಬೇಡಿಕೆ ಅಥವಾ ಬ್ರ್ಯಾಂಡ್‌ನ ಆನ್‌ಲೈನ್ ಉಪಸ್ಥಿತಿಯನ್ನು ನಿರ್ವಹಿಸುವುದು ʼಡೆಕೊರ್‌ ಡಿಲ್‌ʼ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಯುವ ಹುರುದುಂಬಿಸುವ ಮಕ್ಕಳೇ ಅನಿತಾ ಅವರ ನಿರಂತರ ಪ್ರೋತ್ಸಾಹದ ಮೂಲವಾಗಿದ್ದಾರೆ. ಈ ಮಕ್ಕಳು ತಮ್ಮ ತಾಯಿಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ.

ತಮ್ಮ 55ನೇ ವಯಸ್ಸಿನಲ್ಲಿ ವಹಿವಾಟು ಪ್ರಾರಂಭಿಸುವುದು ಅನಿತಾ ಅವರಿಗೆ ಹೊಸ ಸವಾಲುಗಳನ್ನು ತಂದೊಡ್ಡಿತ್ತು. ತಮ್ಮ ಸಾಮರ್ಥ್ಯದ ಬಗೆಗಿನ ಅಪನಂಬಿಕೆ ಮತ್ತು ಕುಟುಂಬದ ನೆಮ್ಮದಿಯ ವಲಯದಿಂದ ಹೊರಗೆ ಹೆಜ್ಜೆ ಹಾಕುವ ಭಯವು ಆರಂಭಿಕ ಅಡಚಣೆಗಳಾಗಿದ್ದವು. ಆದಾಗ್ಯೂ, ಅನಿತಾ ಅವರ ದೃಢತೆ ಮತ್ತು ತಮ್ಮಲ್ಲಿನ ಕರಕುಶಲತೆಯ ಮೇಲಿನ ನಂಬಿಕೆಯು ಈ ಅಡೆತಡೆಗಳನ್ನು ಜಯಿಸಲು ನೆರವಾಯಿತು. ಹೊಸ ತಂತ್ರಜ್ಞಾನಗಳನ್ನು ಕಲಿಯುವುದು ಮತ್ತೊಂದು ಸವಾಲಾಗಿತ್ತು. ತಮ್ಮ ಮಕ್ಕಳ ಅಚಲ ಬೆಂಬಲದ ನೆರವಿನಿಂದ ಅವರು ಹೊಸ ಸಂಗತಿಗಳನ್ನು ಕಲಿಯುವುದನ್ನು ದೃಢವಾಗಿ ಸ್ವೀಕರಿಸಿದರು.

ಯಶಸ್ಸಿಗಿಂತ ಹೆಚ್ಚಿನದು: ಸ್ಫೂರ್ತಿಯ ಪರಂಪರೆ
ಅನಿತಾ ಅವರು ಡೆಕೊರ್‌ಡಿಲ್‌ ವಹಿವಾಟಿನ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ಇದನ್ನು ಭಾರತದಾದ್ಯಂತ ಪ್ರಸಿದ್ಧ ಬ್ರ್ಯಾಂಡ್‌ ಆಗಿ ಜನಪ್ರಿಯಗೊಳಿ ಸುವ ಉದ್ದೇಶ ಹೊಂದಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಆನ್‌ಲೈನ್‌ನಲ್ಲಿ ಉತ್ಪನ್ನ ಖರೀದಿಸಲು ಹೆಮ್ಮೆಪಡಬೇಕೆಂದು ಅನಿತಾ ಅವರು ಬಯಸು ತ್ತಾರೆ. ಅನಿತಾ ಅವರು ತಮ್ಮಲ್ಲಿನ ಉತ್ಸಾಹವನ್ನು ಪ್ರದರ್ಶಿಸಲು ಯಾವತ್ತೂ ಹಿಂದೇಟು ಹಾಕುವುದಿಲ್ಲ. ತನ್ನಂತಹ ಇತರ ತಾಯಂದಿರನ್ನು ಸಬಲೀಕ ರಣಗೊಳಿಸುವುದನ್ನೂ ಅವರು ಬಲವಾಗಿ ಉತ್ತೇಜಿಸುತ್ತಾರೆ. ಅಮ್ಮಂದಿರು ತಾವು ಕನಸುಗಳನ್ನು ಕಾಣುವುದನ್ನು ಮುಂದುವರಿಸಲು ಮತ್ತು ಸ್ವಯಂ-ಅನುಮಾನದಿಂದ ಮುಕ್ತರಾಗಲು ಅವರಿಗೆ ಪ್ರೇರಣೆ ನೀಡುತ್ತಾರೆ.

ಅನಿತಾ ಅವರ ಯಶೋಗಾಥೆಯು ಕೇವಲ ಉದ್ಯಮಶೀಲತೆಯ ಯಶಸ್ಸಿನ ಕಥೆಯಲ್ಲ. ತಮ್ಮಲ್ಲಿನ ಉದ್ಯಮಶೀಲತೆಯ ಉತ್ಸಾಹ ಮುಂದುವರಿಸುವ ಕನಸು ಕಾಣುವ ಎಲ್ಲಾ ತಾಯಂದಿರಿಗೆ ಇದು ʼತಾಯಿಯ ದಿನʼದ ಉಡುಗೊರೆಯಾಗಿದೆ. ಇದು ಕುಟುಂಬದ ಶಕ್ತಿ, ತನ್ನನ್ನು ತಾನು ನಂಬುವುದರ ಮಹತ್ವ ಮತ್ತು ಉತ್ಸಾಹ ಮರುಶೋಧಿಸುವ ಸಂತಸವನ್ನು ಸೂಚಿಸುತ್ತದೆ. ಈ ತಾಯಂದಿರ ದಿನ ನಮ್ಮ ಉತ್ಸಾಹವನ್ನು ಅನುಸರಿಸಲು ಎಂದಿಗೂ ತಡವಾಗಿಲ್ಲ ಎಂಬುದನ್ನು ಅನಿತಾ ಅವರ ಯಶೋಗಾಥೆಯು ನಮಗೆ ನೆನಪಿಸಲಿ. ನಮ್ಮೆಲ್ಲರಿಗೆ ಸ್ಪೂರ್ತಿದಾಯಕವಾಗಿರಲಿ.