Friday, 13th December 2024

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ ನಿಶ್ಚಿತಾರ್ಥ

ಮುಂಬೈ: ವಿಶ್ವದ ಒಂಬತ್ತನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ತನ್ನ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್‌ ಜೊತೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡರು.

ಮುಕೇಶ್ ಅಂಬಾನಿಯ ಮನೆಯಾದ ಅಂಟಿಲಿಯಾದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಈ ಹಿಂದೆ ಈ ಜೋಡಿಯು ಮೆಹೆಂದಿ ಸಮಾರಂಭವನ್ನು ಮಾಡಿದ್ದರು. ಇದರಲ್ಲಿ ರಾಧಿಕಾ ಮರ್ಚೆಂಟ್ ಅಬು ಜನಿ ಸಂದೀಪ್ ಕೋಸ್ಲಾ ಡಿಸೈನ್ ಮಾಡಿದ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.

ಭರತನಾಟ್ಯ ತರಬೇತಿ ಪಡೆದಿರುವ ರಾಧಿಕಾ ಮರ್ಚೆಂಟ್ ಈ ಹಿಂದೆ ಮೆಹೆಂದಿ ವೇಳೆ ನೃತ್ಯವನ್ನು ಕೂಡಾ ಮಾಡಿದ್ದರು. ಅದಕ್ಕೂ ಮುನ್ನ ರಾಧಿಕಾ ಮರ್ಚೆಂಟ್‌ಗಾಗಿ ಅರಂಗೇತ್ರಂ ಕಾರ್ಯಕ್ರಮ ವನ್ನು ಮುಕೇಶ್ ಅಂಬಾನಿ ದಂಪತಿಗಳು ಆಯೋಜನೆ ಮಾಡಿದ್ದರು. ರಾಧಿಕ ಮರ್ಚೆಂಟ್ ಸುಮಾರು ಎಂಟು ವರ್ಷಗಳ ಕಾಲ ತನ್ನ ಗುರು ಭಾವನ ಠಾಕರ್ ಬಳಿ ಮುಂಬೈನ ಶ್ರೀ ನಿಭಾ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿಯಲ್ಲಿ ಭರತನಾಟ್ಯ ಕಲಿತಿದ್ದಾರೆ.

ಕಳೆದ ತಿಂಗಳು ರೋಕಾ ಕಾರ್ಯಕ್ರಮವನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರಾಜಸ್ಥಾನದ ನತದ್ವಾರದಲ್ಲಿರುವ ಶ್ರೀನಾಥಜಿ ದೇವಾಲಯದಲ್ಲಿ ಮಾಡಿಕೊಂಡಿದ್ದರು. ಆ ಕಾರ್ಯಕ್ರಮಕ್ಕೆ ಶಾರುಖ್‌ ಖಾನ್, ಅಲಿಯಾ ಭಟ್, ರಣ್‌ಬೀರ್ ಕಪೂರ್, ಜಾನ್ವಿ ಕಪೂರ್ ಮೊದಲಾ ದವರುಗಳು ಭಾಗಿಯಾಗಿದ್ದರು.