Saturday, 23rd November 2024

ಖಾಸಗಿ ವಾಹಿನಿ ನಿರೂಪಕ ರೋಹಿತ್‌ ರಂಜನ್‌ ಬಂಧನ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೇಳಿಕೆ ತಿರುಚಿ ಪ್ರಸಾರ ಮಾಡಿದ ಆರೋಪದ ಮೇಲೆ ಖಾಸಗಿ  ಚ್ಯಾನೆಲ್ ಸುದ್ದಿ ನಿರೂಪಕ ರೋಹಿತ್‌ ರಂಜನ್‌ ಅವರನ್ನು ನೋಯ್ಡಾ ಪೊಲೀಸರು ಗಾಜಿಯಾಬಾದ್‌ನಲ್ಲಿ ಬಂಧಿಸಿದ್ದಾರೆ.

ನೋಯ್ಡಾ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ರಂಜನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಛತ್ತೀಸ್‌ಗಢ ಪೊಲೀಸರು ಗಾಜಿಯಾ ಬಾದ್‌ನ ಇಂದಿರಾಪುರಂನಲ್ಲಿರುವ ರಂಜನ್ ಮನೆಗೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

‘ಸ್ಥಳೀಯ ಪೊಲೀಸರಿಗೆ ತಿಳಿಸದೆ ನನ್ನನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ನನ್ನ ಮನೆಯ ಹೊರಗೆ ನಿಂತಿದ್ದಾರೆ. ಇದು ಕಾನೂನುಬದ್ಧವಾಗಿದೆಯೇ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್‌ಎಸ್‌ಪಿ ಗಾಜಿಯಾಬಾದ್ ಮತ್ತು ಎಡಿಜಿ ಲಕ್ನೋ ಅವರನ್ನು ಟ್ಯಾಗ್ ಮಾಡಿದ ಟ್ವೀಟ್‌ನಲ್ಲಿ ರಂಜನ್ ಹೇಳಿದ್ದಾರೆ.

ವಿಷಯ ಸ್ಥಳೀಯ ಪೊಲೀಸರ ಅರಿವಿನಲ್ಲಿದೆ. ಇಂದಿರಾಪುರಂ ಪೊಲೀಸ್ ಠಾಣೆ ಸ್ಥಳದಲ್ಲೇ ಇದ್ದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಂಜನ್ ಅವರು ತಮ್ಮ ವಿಶೇಷ ಟೆಲಿವಿಷನ್ ಶೋನಲ್ಲಿ ಹಿರಿಯ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿತ್ತು.