ಹೈದರಾಬಾದ್: ಇತರ ಧರ್ಮದ ಜನರು ದೇವಸ್ಥಾನಗಳಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಹಿಂದೂ ಧರ್ಮವನ್ನು ಅನುಸರಿಸುವವರು ಮಾತ್ರ ದೇವಾಲಯಗಳಲ್ಲಿ ಕೆಲಸ ಮಾಡಲು ಅರ್ಹರು ಎಂದು ನ್ಯಾಯಾಲಯ ಹೇಳಿದೆ.
ಶ್ರೀಶೈಲ ದೇವಸ್ತಾನದ ಕಾರ್ಯನಿರ್ವಾಹಕ ಅಧಿಕಾರಿ ತನ್ನನ್ನು ಸೇವೆಯಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸಿ ಪಿ.ಸುದರ್ಶನ್ ಬಾಬು ಅವರು ಕ್ರಿಶ್ಚಿಯನ್ ಗುರುತನ್ನು ಮರೆಮಾಚಲು ಮತ್ತು ದಾಖಲೆ ಸಹಾಯಕರಾಗಿ ಅನುಕಂಪದ ನೇಮಕಾತಿ ಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿ ನ್ಯಾಯಮೂರ್ತಿ ಹರಿನಾಥ್ ನೂನೆಪಲ್ಲಿ ಅವರು ಇತ್ತೀಚೆಗೆ ಈ ಆದೇಶ ನೀಡಿದ್ದಾರೆ.
2002 ರಲ್ಲಿ ಸುದರ್ಶನ್ ಬಾಬು ಅವರು ಎಸ್ಸಿ (ಮಾಲಾ) ಸಮುದಾಯಕ್ಕೆ ಸೇರಿದವರು ಮತ್ತು ಹಿಂದೂ ಎಂದು ಹೇಳಿಕೊಂಡರು ಮತ್ತು ಅನುಕಂಪದ ನೇಮಕಾತಿಯನ್ನು ಪಡೆದರು.
ನಂತರ 2010ರಲ್ಲಿ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ವಿವಾಹವಾದರು, ನಂತರ ಹಿಂದೂ ಎಂದು ಸುಳ್ಳು ಹೇಳಿಕೊಂಡು ಕೆಲಸ ಪಡೆದಿದ್ದಕ್ಕಾಗಿ ಲೋಕಾಯುಕ್ತದಲ್ಲಿ ಅರ್ಜಿಗಳು ದಾಖಲಾಗಿದ್ದವು.
ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತರು ಸುದರ್ಶನ್ ಬಾಬು ಅವರ ಧರ್ಮವನ್ನು ಮುಚ್ಚಿಟ್ಟು ಕೆಲಸ ಗಿಟ್ಟಿಸಿಕೊಂಡಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಶ್ರೀಶೈಲ ದೇವಸ್ಥಾನದ ಇಒ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸುದರ್ಶನ್ ಬಾಬು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳದೆ ಮಹಿಳೆಯನ್ನು ಮದುವೆಯಾಗಿದ್ದರೆ, ಅದನ್ನು ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ನೋಂದಾಯಿಸಬೇಕು ಮತ್ತು ಕಾಯಿದೆ ಪ್ರಕಾರ ವಿವಾಹ ಪ್ರಮಾಣಪತ್ರವನ್ನು ಸಹ ನೀಡಬೇಕು ಎಂದು ನ್ಯಾಯಮೂರ್ತಿ ಹರಿನಾಥ್ ಹೇಳಿದರು.