Wednesday, 11th December 2024

ಲಾರಿ- ಕಾರಿನ ನಡುವೆ ಢಿಕ್ಕಿ: ಬಾಲಕಿ ಸೇರಿ 5 ಮಂದಿ ಸಾವು

ಗುಂಟೂರು: ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲಾದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಕೋರಿಶಪಡು ಮಂಡಲದ ಮೇದರಮೆಟ್ಲ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಲಾರಿ-ಕಾರು ನಡುವೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ. ಮೃತರನ್ನು ಎಸ್.ಎಸ್. ಸಮಂದ ವರವಿ ವಹೀದಾ (35), ಅವರ ಒಂಬತ್ತು ವರ್ಷದ ಮಗಳು ಆಯೇಷಾ, ಕುಟುಂಬ ಸ್ನೇಹಿತರು ಎಂದು ಗುರುತಿಸಲಾಗಿದೆ. ಟಿಎಸ್ 07 ಜಿಡಿ 3249 ಸಂಖ್ಯೆಯ ಕಾರು ಒಂಗೋಲ್ ಕಡೆಯಿಂದ ಗುಂಟೂರು ಕಡೆಗೆ ಹೋಗು ತ್ತಿತ್ತು. ಈ ವೇಳೆ ಮೇದರಮೆಟ್ಲ ದಕ್ಷಿಣ ಬೈಪಾಸ್ ಬಳಿ ಬರುವಷ್ಟರಲ್ಲಿ ಗಾಡಿಯ ಟೈರ್ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಪಲ್ಟಿಯಾಗಿ ಇನ್ನೊಂದು ಬದಿಗೆ ಹಾರಿದೆ.

ಇದೇ ವೇಳೆ ಗುಂಟೂರಿನಿಂದ ಒಂಗೋಲ್ ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸಹಿತ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.