Friday, 13th December 2024

ತೆಲಂಗಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪತ್ತೆ

ಹೈದರಾಬಾದ್:‌ ಮತ್ತೊಂದು ಮಂಕಿಪಾಕ್ಸ್  ಪ್ರಕರಣ ತೆಲಂಗಾಣದ ವ್ಯಕ್ತಿಯಲ್ಲಿ ಪತ್ತೆಯಾಗಿದೆ.

ಮಂಕಿಪಾಕ್ಸ್ ದೇಶದಲ್ಲಿ ಒಂದೊಂದೇ ರಾಜ್ಯಕ್ಕೆ ನಿಧಾನವಾಗಿ ಕಾಲಿಡುತ್ತಿದೆ.

ಈ ಹಿಂದೆ, ಕಾಮರೆಡ್ಡಿ ಜಿಲ್ಲೆಯ ಇಂದಿರಾನಗರ ಕಾಲೋನಿಯ 40 ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಇವರು ಜು.6 ರಂದು ಕುವೈತ್‌ನಿಂದ ಹಿಂತಿರುಗಿದ್ದರು. ಇವರಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿ ಕೊಂಡ ಪರಿಣಾಮ ಚಿಕಿತ್ಸೆ ಮುಂದುವರೆಸಲಾಗಿತ್ತು.