Saturday, 23rd November 2024

Armaan Malik: ಮತ್ತೆ ವಿವಾದದ ಸುಳಿಯಲ್ಲಿ ಅರ್ಮಾನ್‌ ಮಲಿಕ್‌! ಯೂಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ್ರಾ ಬಿಗ್‌ಬಾಸ್‌ ಒಟಿಟಿ ಸ್ಪರ್ಧಿ?

Armaan Malik

ಮುಂಬೈ: ಖ್ಯಾತ ಯೂಟ್ಯೂಬರ್ (Youtuber) ಅರ್ಮಾನ್‌ ಮಲಿಕ್‌ ಹಾಗೂ ಆತನ ಕುಟುಂಬ ಯಾರಿಗೆ ಗೊತ್ತಿಲ್ಲ ಹೇಳಿ. ಸೋಶಿಯಲ್‌ ಮಿಡಿಯಾಗಳಲ್ಲಿ ಸಕ್ರಿಯರಾಗಿರುವವರಿಗಂತೂ ಇವರ ಬಗ್ಗೆ ಗೊತ್ತೇ ಇದೆ. ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್‌ಬಾಸ್‌ ಒಟಿಟಿಗೂ ಎಂಟ್ರ ಕೊಟ್ಟಿದ್ದ ಅರ್ಮಾನ್‌ ಮಲಿಕ್‌ ಅಲ್ಲೂ ಸಾಕಷ್ಟು ಹಲ್‌ಚಲ್‌ ಎಬ್ಬಿಸಿದ್ದರು. ಇದೀಗ ಈ ಕುಟುಂಬ ಮತ್ತೆ ಸುದ್ದಿಯಲ್ಲಿದೆ. ಅರ್ಮಾನ್‌ ಮಲಿಕ್‌ ವಿರುದ್ಧ ಹರಿದ್ವಾರ್‌ ಮೂಲದ ಯೂಟ್ಯೂಬರ್‌ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಮಲಿಕ್ ತನ್ನ ಬೆಂಬಲಿಗರೊಂದಿಗೆ ಬುಧವಾರ ರಾತ್ರಿ ಜ್ವಾಲಾಪುರದ ಖನ್ನಾನಗರದಲ್ಲಿರುವ ಸೌರಭ್ ಮನೆಗೆ ಬಂದು ಗಲಾಟೆ ಸೃಷ್ಟಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸ್‌

ಇತ್ತೀಚೆಗೆ, ಅರ್ಮಾನ್ ಘಟನೆಯ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದು, ತನ್ನ ಒಂದೂವರೆ ವರ್ಷದ ಮಗಳನ್ನು‌ ಆ ಯೂಟ್ಯೂಬರ್ ನಿಂದಿಸಿದ್ದಾನೆ. ಎಂದು ಹೇಳಿದ್ದಾರೆ. ಸೌರಭ್‌ ಎಂಬ ಹರಿದ್ವಾರ ಮೂಲದ ಯೂಟ್ಯೂಬರ್ ತನ್ನ ಮಗಳ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದು,ಯೂಟ್ಯೂಬ್‌ ಥಂಬ್‌ನೇಲ್‌ಗಳಲ್ಲಿ ಅಶ್ಲೀಲ ಪದವನ್ನು ಉಪಯೋಗಿಸಿದ್ದ ಎಂದು ಹೇಳಿದ್ದಾರೆ. ಬೇರೆಯವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡಬೇಕು, ಆತ ನನ್ನ ಪತ್ನಿಯರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾನೆ. ಈ ವಿಷಯ ಸಂಬಂಧ ನಾನು ಆತನ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.

ವಿಡಿಯೋದಲ್ಲಿ, ನಾವು ಆತನ ಮನೆಗೆ ಹೋಗಿದ್ದು ನಿಜ, ಆತನಿಗೆ ಕ್ಷಮೆ ಕೇಳಲು ಹೇಳಿದ್ದೆವು. ಆತ ಸಾಮಾಜಿಕ ಜಾಲತಾಣದಲ್ಲಿ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿಯೇ ಆತ ಕ್ಷಮೆಯಾಚಿಸಬೇಕು ಎಂದು ಅರ್ಮಾನ್‌ ಮಲಿಕ್‌ ಹೇಳಿದ್ದಾರೆ.

ಅರ್ಮಾನ್‌ ಮಲಿಕ್‌ ತನ್ನ ಇಬ್ಬರು ಪತ್ನಿಯರಾದ ಪಾಯಲ್‌ ಹಾಗೂ ಕೃತಿಕಾ ಜತೆ ಯೂಟ್ಯೂನಲ್ಲಿ ವಿಡಿಯೋ ಮಾಡುವ ಮೂಲಕ ಜನಪ್ರಿಯರಾಗಿದ್ದರು. ನಂತರ ಬಿಗ್‌ಬಾಸ್‌ ಒಟಿಟಿಯಲ್ಲಿಯೂ ತನ್ನ ಪತ್ನಿಯರೊಂದಿಗೆ ಭಾಗವಹಿಸಿದ್ದರು.

ಪಾಯಲ್‌ ಮಲಿಕ್‌ ಮೊದಲ ಪತ್ನಿಯಾಗಿದ್ದು, ಮಲಿಕ್‌ ಕೃತಿಕಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಕೃತಿಕಾ ಪಾಯಲ್‌ ಗೆಳತಿಯಾಗಿದ್ದು, ಮಲಿಕ್‌ ಮನೆಗೆ ಆಗಾಗ ಬರುತ್ತಿದ್ದಳು. ಅಲ್ಲಿಂದ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು, ಎನ್ನಲಾಗಿದೆ. ನಂತರ ಖುದ್ದು ಪಾಯಲ್, ಅರ್ಮಾನ್‌ ಹಾಗೂ ಕೃತಿಕಾ ಮದುವೆ ಮಾಡಿಸಿದ್ದಾಳೆ. ಸದ್ಯ ಮೂವರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ : Salman khan : 60 ಬಾಡಿಗಾರ್ಡ್‌ಗಳ ಜತೆ ಬಿಗ್‌ ಬಾಸ್‌ ಶೂಟಿಂಗ್‌ಗೆ ತೆರಳಿದ ಸಲ್ಮಾನ್ ಖಾನ್‌!