Friday, 13th December 2024

ಜೂನ್’ನಲ್ಲಿ 12 ಕೋಟಿ ಲಸಿಕೆ ಲಭ್ಯ: ಆರೋಗ್ಯ ಸಚಿವಾಲಯ

ನವದೆಹಲಿ: ಮೇ ತಿಂಗಳಿನಲ್ಲಿ ಒಟ್ಟು 7.94 ಕೋಟಿಯಷ್ಟು ಲಸಿಕೆಯನ್ನು ಉತ್ಪಾದನೆ ಮಾಡಲಾಗಿದೆ. ಆದರೆ, 12 ಕೋಟಿ ಲಸಿಕೆ ಜೂನ್‌ ತಿಂಗಳಿನಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯನ್ನು ವಿತರಣೆಯ ಮಾದರಿ, ಜನಸಂಖ್ಯೆ ಮತ್ತು ವಾಕ್ಸಿನ್ ವೇಸ್ಟೇಜ್ ಪ್ರಮಾಣ ನೋಡಿಕೊಂಡು ಹಂಚಲಾಗುತ್ತದೆ. ಜೂನ್ ತಿಂಗಳಿನಲ್ಲಿ ಲಸಿಕೆಯ ಲಭ್ಯತೆಯ ಬಗ್ಗೆ ಮುಂಚಿತ ವಾಗಿಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಜೂನ್ ತಿಂಗಳಿನಲ್ಲಿ 6,09,60,000 ಡೋಸ್‌ಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಮತ್ತು 45+ ವಯಸ್ಸಿನವರಿಗೆ ಇದರಲ್ಲಿ ಆದ್ಯತೆ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ 5,86,10,000 ಡೋಸ್‌ಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಪಡೆದುಕೊಳ್ಳಲು ಲಭ್ಯವಾಗಲಿದೆ.

ಹೀಗಾಗಿ, ಜೂನ್’ನಲ್ಲಿ ಒಟ್ಟು 12 ಕೋಟಿ ಲಸಿಕೆ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಲಭ್ಯವಾಗಲಿದೆ ಹಾಗೂ ದೊರೆ ಯುವ ಲಸಿಕೆಗಳನ್ನು ಪರಿಣಾಮಕಾರಿಯಾಗಿ, ಎಚ್ಚರಿಕೆಯಿಂದ ಬಳಸಿಕೊಳ್ಳಬೇಕೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.