Friday, 13th December 2024

ಎನ್ಐಎನಿಂದ ಮಹಿಳಾ ಮಾವೋವಾದಿ ಕೇಡರ್ ಬಂಧನ

ನವದೆಹಲಿ: 22 ಪೊಲೀಸರ ಸಾವಿಗೆ ಮತ್ತು 30ಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯಗಳಿಗೆ ಕಾರಣವಾದ ಛತ್ತೀಸ್ಗಢದ ಬಿಜಾಪುರ ಎನ್ಕೌಂಟರ್ ಪ್ರಕರಣ (2021ರಲ್ಲಿ ) ದಲ್ಲಿ ಮಹಿಳಾ ಮಾವೋವಾದಿ ಕೇಡರ್ ಅನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ.
ಬಿಜಾಪುರ ಜಿಲ್ಲೆಯ ತರ್ರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಟೇಕಲ್ಗುಡಿಯಂ ಗ್ರಾಮದಲ್ಲಿ ಎನ್ಕೌಂಟರ್ ನಡೆದಿತ್ತು. ಆರಂಭದಲ್ಲಿ ತರ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತು. ತನಿಖೆಯ ವೇಳೆ, ಬಿಜಾಪುರ ಜಿಲ್ಲೆಯ ಭೋಪಾ ಲ್ಪಟ್ಟಣಂ ಪ್ರದೇಶದಲ್ಲಿ ಮಹಿಳಾ ಮಾವೋವಾದಿಯೊಬ್ಬರು ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ.
ಈ ಪ್ರಕರಣದಲ್ಲಿ ಬೇಕಾಗಿದ್ದ ಮಹಿಳಾ ಮಾವೋವಾದಿಯನ್ನು ಯಶಸ್ವಿಯಾಗಿ ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದರು. ಮಹಿಳಾ ಕೇಡರ್ ಅನ್ನು ಮಡ್ಕಮ್ ಉಂಗಿ ಅಲಿಯಾಸ್ ಕಮಲ ಎಂದು ಗುರುತಿಸಲಾಗಿದೆ.