Wednesday, 11th December 2024

ಅರುಣಾಚಲ ಪ್ರದೇಶ, ಮಿಜೋರಾಂ ರಾಜ್ಯಗಳ ರಚನಾ ದಿನ: ಶುಭ ಕೋರಿದ ಪ್ರಧಾನಿ

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಚನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆ ರಾಜ್ಯದ ಜನತೆಗೆ ಶನಿವಾರ ಶುಭಾಶಯ ಕೋರಿದ್ದಾರೆ. ಈ ಎರಡೂ ರಾಜ್ಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

1987ರ ಫೆಬ್ರುವರಿ 21ರಂದು ಈ ಎರಡೂ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನ ದೊರೆಯಿತು.

ಪ್ರಧಾನಿ ಮೋದಿ ಟ್ವೀಟ್‌ ಮಾಡಿ, ‘ಅರುಣಾಚಲ ರಾಜ್ಯವು ಸಂಸ್ಕೃತಿ, ಧೈರ್ಯ ಮತ್ತು ದೇಶದ ಅಭಿವೃದ್ಧಿಯ ಮೇಲಿನ ಬದ್ಧತೆಗೆ ಹೆಸರುವಾಸಿಯಾಗಿದೆ. ಪ್ರಗತಿಯ ನೂತನ ಶಿಖರವನ್ನೇರಲಿ’ ಎಂದು ಹಾರೈಸಿದ್ದಾರೆ. ರಾಜ್ಯ ರಚನಾ ದಿನ ಸಂಭ್ರಮಿಸುತ್ತಿರುವ ಮಿಜೋರಾಂಗೂ ಪ್ರಧಾನಿ ಶುಭ ಕೋರಿದ್ದಾರೆ.

ಮಿಜೋರಾಂ ಜನರು ಕರುಣೆಯ ಮನೋಭಾವ ಮತ್ತು ಪ್ರಕೃತಿಯೊಂದಿಗಿನ ತಮ್ಮ ಸರಳ ಜೀವನ ಶೈಲಿಗಾಗಿ ಗುರುತಿಸಿಕೊಂಡಿ ದ್ದಾರೆ. ನಾನು ಈ ರಾಜ್ಯದ ಅಭಿವೃದ್ಧಿಗಾಗಿ ಸದಾ ಪ್ರಾರ್ಥಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.