Saturday, 14th December 2024

ಆಸಾರಾಮಜಿ ಬಾಪುಗೆ ಜೀವಾವಧಿ ಶಿಕ್ಷೆ

ಗಾಂಧಿನಗರ: ಓರ್ವ ಮಹಿಳೆಯ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಪೂಜ್ಯ ಪಾದ ಸಂತಶ್ರೀ ಆಸಾರಾಮಜಿ ಬಾಪು ಇವರಿಗೆ ಗಾಂಧಿನಗರದಲ್ಲಿನ ಸೆಶನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ ೧೦ ವರ್ಷಗಳಿಂದ ಬಾಪು ಜೋದಪುರದ ಕಾರಾಗೃಹದಲ್ಲಿದ್ದಾರೆ. ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆಯ ಪ್ರಕರಣ ದಲ್ಲಿ ಅವರು ಅಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

೨೦೧೩ ರಲ್ಲಿ ಈ ಪ್ರಕರಣದಲ್ಲಿ ಸೆಶನ್ಸ್ ನ್ಯಾಯಾಲಯವು ಪೂಜ್ಯ ಬಾಪು ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಮಹಿಳೆ ೨೦೦೧ ರಿಂದ ೨೦೦೬ ವರೆಗೆ ಪೂಜ್ಯ ಬಾಪು ಇವರ ಕರ್ಣಾವತಿ ಇಲ್ಲಿಯ ಆಶ್ರಮದಲ್ಲಿ ವಾಸವಾಗಿದ್ದಾಗ ಪೂಜ್ಯ ಬಾಪು ಇವರು ಅನೇಕ ಸಲ ಆಕೆಯ ಲೈಂಗಿಕ ಶೋಷಣೆ ಮಾಡಿರುವ ಆರೋಪ ಇದೆ. ಈ ಅಪರಾಧದಲ್ಲಿನ ಇತರ ಆರು ಜನರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.