Wednesday, 18th September 2024

ನಿರ್ಬಂಧಿತ ವರ್ಗಗಳ ಬ್ರ್ಯಾಂಡ್ ವಿಸ್ತರಣೆಯ ಅರ್ಹತೆಗಾಗಿ ಮಾರ್ಗಸೂಚಿಗಳನ್ನು ಬಲಪಡಿಸಿದ ASCI

ನವದೆಹಲಿ: ಭಾರತದ ಜಾಹೀರಾತುಗಳ ಮಾನದಂಡಗಳ ಪರಿಷತ್ತು (ASCI), ಕಾನೂನಾತ್ಮಕವಾಗಿ ಜಾಹೀರಾತುಗೊಳ್ಳುವುದರಿಂದ ನಿಷೇಧಿಸಲ್ಪಟ್ಟ ನಿರ್ಬಂಧಿತ ವರ್ಗದಡಿ ಬರುವ “ಉತ್ಪನ್ನಗಳು ಹಾಗೂ ಸೇವೆಗಳ ಬ್ರ್ಯಾಂಡ್ ವಿಸ್ತರಣೆಗಾಗಿ ಅರ್ಹತೆ”ಯ ತನ್ನ ಮಾರ್ಗಸೂಚಿಗಳನ್ನು ನವೀಕರಿಸಿದೆ.

ಈ ಬದಲಾವಣೆಗಳನ್ನು, ASCI ಸಂಹಿತೆಯ ಅಧ್ಯಾಯ III ರ ಅನುಚ್ಛೇದ 3.6 (a) ದಲ್ಲಿ ವಿವರಿಸಲಾ ಗಿದ್ದು, ಇದು, ಮದ್ಯ ಮತ್ತು ತಂಬಾಕು ಮೊದಲಾದ ನಿರ್ಬಂಧಿತ ವರ್ಗಗಳ ಜೊತೆ ಸಂಬಂಧ ಹೊಂದಿರುವ ಬ್ರ್ಯಾಂಡ್ ವಿಸ್ತರಣೆಗಳನ್ನು ನಿರ್ದಿಷ್ಟವಾಗಿ ಗುರಿಯಿರಿಸಿದೆ.

ಬ್ರ್ಯಾಂಡ್ ವಿಸ್ತರಣೆಗಾಗಿ ಕೆಲವು ತಿಂಗಳುಗಳ ಹಿಂದೆ ಬದಲಾಯಿಸಲಾದ ನಿರ್ದಿಷ್ಟ ಮಾರ್ಗಸೂಚಿ ಗಳನ್ನು ASCI ಹೊಂದಿದ್ದರೂ, ಭಾರತದಲ್ಲಿ ನಡೆ ಯುವ ಉನ್ನತ ಮಟ್ಟದ ಕ್ರೀಡಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಹು-ಬಜೆಟ್ ಸೆಲೆಬ್ರಿಟಿ ಪ್ರಚಾರಗಳ ದೃಷ್ಟಿಯಿಂದ ಇದನ್ನು ಇನ್ನಷ್ಟು ಬಲಪಡಿಸು ವುದು ಅಗತ್ಯ ಎಂದು ಕಂಡುಕೊಳ್ಳಲಾಯಿತು. ಬ್ರ್ಯಾಂಡ್ ವಿಸ್ತರಣೆಗಾಗಿ ಇರುವ ASCIದ ಪ್ರಸ್ತುತದ ಮಾರ್ಗಸೂಚಿಗಳು, ಬ್ರ್ಯಾಂಡ್ ವಿಸ್ತರಣೆಗಳನ್ನು ನಿಜವಾದ ವಿಸ್ತರಣೆಗಳೆಂದು ಪರಿಗಣಿಸುವುದಕ್ಕಾಗಿ ವ್ಯಾಪಾರ, ಹೂಡಿಕೆ ಅಥವಾ ವಿತರಣಾ ಅರ್ಹತೆಯ ಕೆಲವೊಂದು ಮಿತಿಗಳನ್ನು ಮೀರಲು ಅವಕಾಶ ಒದಗಿಸುತ್ತದೆ. ಮೇಲೆ ತಿಳಿಸಿದ ವಿಸ್ತರಣೆಯ ಒಟ್ಟೂವಹಿವಾಟಿಗೆ ಸಂಬಂಧಿಸಿದಂತೆ ಮಾಡುವ ಜಾಹೀರಾತು ವೆಚ್ಚಗಳಿಗಾಗಿಯೂ, ASCI ಈಗ ನಿರ್ದಿಷ್ಟ ಅರ್ಹತೆಗಳನ್ನು ಸೇರಿಸಿದೆ.

ಬ್ರ್ಯಾಂಡ್ ವಿಸ್ತರಣೆಗಳಿಗಾಗಿ ಇರುವ ಹೊಸ ಸಂಹಿತೆಯ ಪ್ರಮುಖಾಂಶಗಳು:
1. ಜಾಹೀರಾತು ವೆಚ್ಚಗಳು, ವಿಸ್ತರಣೆಯ ಮಾರಾಟ ವಹಿವಾಟಿಗೆ ಅನುಗುಣವಾಗಿ ಇರಬೇಕು: ನಿರ್ಬಂಧಿತ ಮಾಸ್ಟರ್ ಬ್ರ್ಯಾಂಡ್‌ಗಳ ನಿಜವಾದ ಬ್ರ್ಯಾಂಡ್ ವಿಸ್ತರಣೆಗಳಿಗಾಗಿ ಮಾಡುವ ಜಾಹೀರಾತು ವೆಚ್ಚವು, ವಿಸ್ತರಣೆಯ ಮಾರಾಟ್ರ ವಹಿವಾಟಿಗೆ ಅನುಗುಣ ವಾಗಿ ಇರಬೇಕೆಂದು ASCI ಕಡ್ಡಾಯಗೊಳಿಸಿದೆ. ವಿಸ್ತರಣೆಯ ಪರಿಚಯದ ಮೊದಲ ಎರಡು ವರ್ಷ ಗಳಲ್ಲಿ, ಜಾಹೀರಾತು ಬಜೆಟ್‌ಗಳು, ವಹಿವಾಟಿನ ಶೇಕಡ 200ಕ್ಕೆ(ಅಂದರೆ, ಶೇಕಡ 200ಕ್ಕಿಂತ ಹೆಚ್ಚಿಗೆ ಇಲ್ಲ) ಮಿತಿಗೊಳಿಸಲಾಗಿದ್ದು, ತದನಂತರ, ಮೂರನೇ ವರ್ಷದಲ್ಲಿ ಆದಾಯದ ಶೇಕಡ 100(ಅಂದರೆ, ಶೇಕಡ 100ಕ್ಕಿಂತ ಹೆಚ್ಚಿಗೆ ಇಲ್ಲ), ನಾಲ್ಕನೆ ವರ್ಷದಲ್ಲಿ ಶೇಕಡ 50 ಹಾಗೂ ತದನಂತರ ಶೇಕಡ 30 ಎಂದು ನಿಗದಿಗೊಳಿಸಲಾಗಿದೆ ಜಾಹೀರಾತು ಬಜೆಟ್, ಹಿಂದಿನ 12 ತಿಂಗಳುಗಳಲ್ಲಿ ಏರ್ಪಟ್ಟ ಮಾದ್ಯಮದ ಎಲ್ಲಾ ರೂಪಗಳಾದ್ಯಂತ ಮಾಧ್ಯಮ ವೆಚ್ಚಗಳು, ವಾರ್ಷೀಕೃತ ಆಧಾರದ ಮೇಲೆ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಾಗಿ ಸೆಲೆಬ್ರಿಟಿಗಳಿಗೆ ಮಾಡುವ ಪಾವತಿಗಳು, ಹಾಗೂ ಹಿಂದಿನ ಮೂರು ವರ್ಷಗಳಲ್ಲಿ ಬ್ರ್ಯಾಂಡ್ ವಿಸ್ತರಣೆಗಾಗಿ ಜಾಹೀರಾತು ನಿರ್ಮಾಣದ ಮೇಲೆ ವ್ಯಯಿಸಲಾದ ವಾರ್ಷಿಕ ಸರಾಸರಿ ಹಣವನ್ನು ಒಳಗೊಂಡಿದೆ.

ಈ ಕ್ರಮವು, ಕಾಲಕಳೆದಂತೆ, ವಿಸ್ತರಣೆಯ ಮಾರಾಟ ಕಾರ್ಯಕ್ಷಮತೆಗೆ ಅನುಗುಣವಾಗಿರುವಂತಹ ಜಾಹೀರಾತು ಹೂಡಿಕೆಗೆ ಒಂದು ಸಮತೋಲನ ದೃಷ್ಟಿಕೋನವನ್ನು ಖಾತರಿಪಡಿಸುತ್ತದೆ.

2. ಬ್ರ್ಯಾಂಡ್ ವಿಸ್ತರಣೆಯಡಿ ಬರುವ ವೇರಿಯಂಟ್‌ಗಳ ನಿರ್ವಹಣೆ: ಸ್ಪಷ್ಟತೆಗಾಗಿ, ಬ್ರ್ಯಾಂಡ್ ವಿಸ್ತರಣೆಯಡಿ ಪರಿಚಯಿಸಲಾಗುವ ವೇರಿಯಂಟ್‌ಗಳನ್ನು, ಹೊಸ ವಿಸ್ತರಣೆ ಎಂದು ಪರಿಗಣಿಸಲಾಗುವುದಿಲ್ಲ. ಮೊದಲ ಬ್ರ್ಯಾಂಡ್ ವಿಸ್ತರಣೆಯ ಮೂಲ ದಿನಾಂಕವು ಅನ್ವಯವಾಗುತ್ತದೆ.

3. ಪ್ರತಿಷ್ಠಿತ ಸಿಎ ಸಂಸ್ಥೆಯಿಂದ ಪ್ರಮಾಣಪತ್ರ: ಅನುಸರಣೆಯನ್ನು ಖಾತರಿಪಡಿಸಲು, ಜಾಹೀರಾತಿಗಾಗಿ ಮಾಡುವ ಬ್ರ್ಯಾಂಡ್ ವಿಸ್ತರಣೆಯ ಅರ್ಹತೆ ಗಳನ್ನು ಪುಷ್ಟೀಕರಿಸುವ ಎಲ್ಲಾ ಪುರಾವೆಗಳನ್ನು, ಪ್ರತಿಷ್ಠಿತ ಹಾಗೂ ಸ್ವತಂತ್ರ ಸಿಇ ಸಂಸ್ಥೆ ಪ್ರಮಾಣೀಕರಿಸಿರಬೇಕು.

4. ನಿರ್ಬಂಧಿತ ವರ್ಗಗಳ ಪೈಕಿ ಒಂದು ವರ್ಗದಡಿ ಇರುವ ಮೂಲ ಬ್ರ್ಯಾಂಡ್ನ ಬ್ರ್ಯಾಂಡ್ ವಿಸ್ತರಣೆಯು, ನವೀಕೃತ ಅರ್ಹತೆಗಳನ್ನು ಪೂರೈಸದಿದ್ದರೆ, ASCI, ಅದನ್ನು ನಿಜವಾದ ವಿಸ್ತರಣೆ ಎಂದು ಪರಿಗಣಿಸುವುದಿಲ್ಲ, ಬದಲಿಗೆ, ನಿರ್ಬಂಧಿತ ವರ್ಗವನ್ನು ಜಾಹೀರಾತು ಮಾಡಲು ಸೃಷ್ಟಿಸಲಾದ ಕೃತಕ ವಿಸ್ತರಣೆ ಎಂದು ಪರಿಗಣಿಸುತ್ತದೆ. ASCIದ ನವೀಕರಣಗಳು, ಭಾರತದಲ್ಲಿ ಜಾಹೀರಾತಿನ ಘನತೆಯನ್ನು ಕಾಪಾಡುವಲ್ಲಿ, ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವಲ್ಲಿ, ಹಾಗೂ ತಪ್ಪುದಾರಿಗೆಳೆಯುವ ಪದ್ಧತಿಗಳಿಂದ ಗ್ರಾಹಕರನ್ನು ಸಂರಕ್ಷಿಸುವಲ್ಲಿ ಕೊಡುಗೆ ಸಲ್ಲಿಸುತ್ತವೆ.

ಬ್ರ್ಯಾಂಡ್ ವಿಸ್ತರಣೆ ಮಾರ್ಗಸೂಚಿಗಳಿಗೆ ಮಾಡಲಾದ ಹೊಸ ಬದಲಾವಣೆಯ ತಿದ್ದುಪಡಿಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲುತ್ತಾ, ASCIದ ಸಿಇಒ ಮತ್ತು ಸೆಕ್ರೆಟರಿ ಜನರಲ್ ಮನಿಷ ಕಪೂರ್, “ಗ್ರಾಹಕ ಸಂರಕ್ಷಣೆ ಹಾಗೂ ನೀತಿಯುತ ಜಾಹೀರಾತಿಗೆ ನಮ್ಮ ನಿರಂತರ ಬದ್ಧತೆಯ ಭಾಗವಾಗಿ, ASCI, ಬ್ರ್ಯಾಂಡ್ ವಿಸ್ತರಣಾ ಮಾರ್ಗಸೂಚಿಗಳಿಗೆ ಈ ಹೊಸ ಸೇರ್ಪಡೆಗಳನ್ನು ಪರಿಚಯಿಸಿದೆ. ಬ್ರ್ಯಾಂಡ್ ವಿಸ್ತರಣೆಗಳನ್ನು, ನಿರ್ಬಂಧಿತ ವರ್ಗಗಳಲ್ಲಿನ ಜಾಹೀರಾತಿಗಾಗಿ ಕೃತಕ ವಿಸ್ತರಣೆಯಾಗಿ ದುರ್ಬಳಕೆ ಮಾಡುವುದನ್ನು ತಡೆಗಟ್ಟುವುದಕ್ಕೆ ಈ ಕ್ರಮಗಳು ಅತ್ಯಗತ್ಯವಾಗಿವೆ. ಉದ್ದಿಮೆಯಲ್ಲಿ ಜಾಹೀರಾತುಗಳ ಘನತೆಯನ್ನು ಈ ಮಾರ್ಗಸೂಚಿಗಳನ್ನು ಬಲಪಡಿಸಲಿವೆ ಎಂದು ನಾವು ನಂಬಿದ್ದೇವೆ.”ಎಂದು ಹೇಳಿದರು.

Leave a Reply

Your email address will not be published. Required fields are marked *