Friday, 13th December 2024

ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕ: ಭಾರತದ 75 ವಿವಿಗೆ ಮೂರನೇ ಸ್ಥಾನ

ವದೆಹಲಿ: ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕಗಳು 2023ನ್ನ ಬಿಡುಗಡೆಯಾಗಿದೆ. ಏಷ್ಯಾದ ವಿವಿಧ ದೇಶಗಳ ವಿಶ್ವವಿದ್ಯಾಲಯಗಳಿಗೆ ಶ್ರೇಯಾಂಕ ಗಳನ್ನ ನೀಡಲಾಗಿದೆ. ಜಪಾನ್‌ನ ಗರಿಷ್ಠ 117 ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ.

95 ವಿಶ್ವವಿದ್ಯಾಲಯಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ. ಭಾರತದ 75 ವಿಶ್ವವಿದ್ಯಾ ಲಯಗಳು ಮೂರನೇ ಸ್ಥಾನವನ್ನ ಗಳಿಸುವಲ್ಲಿ ಯಶಸ್ವಿಯಾಗಿದೆ.

ಭಾರತದಿಂದ ಅತ್ಯುನ್ನತ ಶ್ರೇಯಾಂಕದ ಸಂಸ್ಥೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಗಿದ್ದು, ಕಳೆದ ವರ್ಷ 42ನೇ ಸ್ಥಾನದಲ್ಲಿದ್ದ ವಿವಿ ಈ ವರ್ಷ 48ನೇ ಸ್ಥಾನದಲ್ಲಿದೆ. ಇದಲ್ಲದೇ ಟಾಪ್ 100 ವಿಶ್ವವಿದ್ಯಾನಿಲಯಗಳಲ್ಲಿ ಇನ್ನೂ 3 ಭಾರತೀಯ ವಿಶ್ವವಿದ್ಯಾಲಯಗಳು ಸೇರಿಕೊಂಡಿವೆ.

ಅವುಗಳೆಂದ್ರೆ, JSS ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ರ್ಯಾಂಕ್ 68), ಶೂಲಿನಿ ಯುನಿವರ್ಸಿಟಿ ಆಫ್ ಬಯೋಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸೈನ್ಸ್ (ರ್ಯಾಂಕ್ 77) ಮತ್ತು ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ (ರ್ಯಾಂಕ್ 95).

106ನೇ ಸ್ಥಾನದಲ್ಲಿ IIIT ಹೈದರಾಬಾದ್, 111 ನೇ ರ್ಯಾಂಕ್‌ನಲ್ಲಿ ಅಳಗಪ್ಪ ವಿಶ್ವವಿದ್ಯಾಲಯ, ಸವಿತಾ ವಿಶ್ವವಿದ್ಯಾಲಯ (113 ನೇ ರ್ಯಾಂಕ್), ಜಾಮಿಯಾ ಮಿಲಿಯಾ ಇಸ್ಲಾಮಿಯಾ (128 ನೇ ರ್ಯಾಂಕ್), IIT ರೋಪರ್ (131 ನೇ ರ್ಯಾಂಕ್) ಮತ್ತು IIIT ದೆಹಲಿ (137 ನೇ ರ್ಯಾಂಕ್) ಹೆಸರು ಸೇರಿಸಲಾಗಿದೆ. ಏಷ್ಯಾದ ಅಗ್ರ 200 ವಿಶ್ವವಿದ್ಯಾಲಯಗಳಲ್ಲಿ ಒಟ್ಟು 18 ಭಾರತೀಯ ಸಂಸ್ಥೆಗಳು ಸೇರಿವೆ.