Tuesday, 17th September 2024

ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರಿಗಾಗಿ ಮೊದಲ ಬಯೋಸಿಮಿಲರ್ ಆಸ್ಪರ್ಟ್

INSUQUICK ಬಿಡುಗಡೆಗೊಳಿಸಲು ಬಯೋಜೆನೊಮಿಕ್ಸ್‌ನೊಂದಿಗೆ USV ಕೈಜೋಡಿಸಿದೆ

INSUQUICK ಇದು 100% ಭಾರತ ನಿರ್ಮಿತವಾಗಿದ್ದು, ಮಧುಮೇಹ ಹೊಂದಿರುವ ಜನರಿಗೆ ಚಿಕಿತ್ಸೆಯ ಲಭ್ಯತೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ

ನವದೆಹಲಿ: ಯುಎಸ್‌ವಿ ಪ್ರೈವೇಟ್ ಲಿಮಿಟೆಡ್ ಮತ್ತು ಬಯೋಜೆನೊಮಿಕ್ಸ್ ಸಂಸ್ಥೆಗಳು ಜೊತೆಗೂಡಿ ಭಾರತದ ಮೊದಲ ಬಯೋಸಿಮಿಲರ್ ಇನ್ಸುಲಿನ್ ಆಸ್ಪರ್ಟ್ INSUQUICK® ಅನ್ನು ಪ್ರಾರಂಭಿಸುವುದಾಗಿ ಘೋಷಿಸಿವೆ, ಇದು ಮಧುಮೇಹ ಹೊಂದಿರುವ ಜನರಿಗೆ ಇನ್ಸುಲೀನ್ ಲಭ್ಯತೆಯನ್ನು ಸುಧಾರಿಸಲಿದೆ.

101 ಮಿಲಿಯನ್ ಜನರನ್ನು ಹೊಂದಿರುವ ದೇಶದ ವಯಸ್ಕ ಜನಸಂಖ್ಯೆಯ ಸುಮಾರು 11.4% ಜನರು ಮಧುಮೇಹದಿಂದ ಬಳಲುತ್ತಿರುವ ಕಾರಣ ಮಧುಮೇಹವು ಭಾರತದಲ್ಲಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಇದಲ್ಲದೆ, ಇನ್ನೂ 136 ಮಿಲಿಯನ್ ಜನರು ಪೂರ್ವ-ಮಧುಮೇಹ ಮತ್ತು ಕಡಿಮೆ ಸಮಯದಲ್ಲಿ ಮಧುಮೇಹಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಯನ್ನು ಹೊಂದಿದ್ದಾರೆ.

InsuQuick ಒಂದು “ಮೇಕ್ ಇನ್ ಇಂಡಿಯಾ” ಉತ್ಪನ್ನವಾಗಿದ್ದು, 100% ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿ, ಅಭಿವೃದ್ಧಿಪಡಿಸ ಲಾಗಿದೆ ಮತ್ತು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ದೃಢವಾದ ಕ್ಲಿನಿಕಲ್ ಪ್ರೋಗ್ರಾಂಗೆ ಒಳಗಾಗಿದೆ. ಇದು ಎಲ್ಲಾ ಮಹಾನಗರ ಗಳಲ್ಲಿ ಮತ್ತು ಶ್ರೇಣಿ I/II ನಗರಗಳಲ್ಲಿ ಲಭ್ಯವಿದೆ.

ಯುಎಸ್‌ವಿ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಶಾಂತ್ ತಿವಾರಿ ಮಾತನಾಡುತ್ತಾ, “ಮಧುಮೇಹ ಹೊಂದಿರುವ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ನಮ್ಮ ಬದ್ಧತೆಯು ಅಚಲವಾಗಿ ಉಳಿದಿದೆ. ಓರಲ್ ಆ್ಯಂಟಿ-ಡಯಾಬೇಟ್ಸ್ ವಿಭಾಗದಲ್ಲಿ ನಾಯಕರಾಗಿ, ಚುಚ್ಚುಮದ್ದಿನ ನಮ್ಮ ವಿಸ್ತರಣೆಯು, ನಮ್ಮ ಮಾರುಕಟ್ಟೆಯ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಮಧುಮೇಹ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ಮಹತ್ವಾಕಾಂಕ್ಷೆಯನ್ನು ಪೂರೈಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಕ್ರಮವನ್ನು ಪ್ರತಿನಿಧಿಸುತ್ತದೆ. ಬಯೋಜೆನೊಮಿಕ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯ ಮೂಲಕ, ನಮ್ಮ ಮಧುಮೇಹ ಸಮುದಾಯವನ್ನು ಬೆಂಬಲಿಸಲು ಜಾಗತಿಕ ಗುಣಮಟ್ಟದ ಇನ್ಸುಲಿನ್ ಅನ್ನು ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ”. ಎಂದು ಅಭಿಪ್ರಾಯಪಟ್ಟರು.

ಬಯೋಜೆನೊಮಿಕ್ಸ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಸಂಜಯ್ ಸೋನಾರ್ ಅವರು ಮಾತನಾಡುತ್ತಾ, “ಇನ್ಸುಲಿನ್ ಆಸ್ಪರ್ಟ್ ಕ್ಷಿಪ್ರ-ಆಕ್ಟಿಂಗ್ ಇನ್ಸುಲಿನ್ ವಿಭಾಗದಲ್ಲಿ ಮೊದಲ ಬಯೋಸಿಮಿಲರ್ ಆಗಿದೆ ಮತ್ತು ಇದು ಹತ್ತು ವರ್ಷಗಳ ಆರ್ & ಡಿ ಪ್ರಯತ್ನಗಳ ಫಲಿತಾಂಶವಾಗಿದೆ.” ಎಂದು ಹೇಳಿದರು.

ಬಯೋಜೆನೊಮಿಕ್ಸ್‌ನ ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ.ಅರ್ಚನಾ ಕೃಷ್ಣನ್ ಅವರು ಮಾತನಾಡುತ್ತಾ, “INSUQUICK ಅನ್ನು ಹೆಮ್ಮೆಯಿಂದ 100% ಭಾರತದಲ್ಲಿಯೇ ತಯಾರಿಸಲಾಗಿದೆ, ರಚನಾತ್ಮಕ ಅನುಸರಣೆಗಾಗಿ ಫಿಂಗರ್‌ಪ್ರಿಂಟ್ ತರಹದ ಸಾದೃಶ್ಯವನ್ನು ಬಳಸುವ ಸ್ಥಳೀಯ ತಂತ್ರಜ್ಞಾನ ವನ್ನು ಬಳಸಿಕೊಳ್ಳಲಾಗಿದೆ. ಇದಲ್ಲದೆ, ನಮ್ಮ ವ್ಯಾಪಕವಾದ ಕ್ಲಿನಿಕಲ್ ಪ್ರೋಗ್ರಾಂ ಈ ಅದ್ಭುತ ಉತ್ಪನ್ನದ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸ್ಥಾಪಿಸಲು ಸಮರ್ಪಿಸಲಾಗಿದೆ.” ಎಂದು ಹೇಳಿದರು.

Insuquikಗಳು ಕಾರ್ಟ್ರಿಡ್ಜ್‌ಗಳು, ಬಾಟಲುಗಳು ಮತ್ತು ಪೂರ್ವ ತುಂಬಿದ ಬಿಸಾಡಬಹುದಾದ ಪೆನ್ನುಗಳಲ್ಲಿ ಲಭ್ಯವಿರುತ್ತದೆ, ಇದು ಮಧುಮೇಹ ಹೊಂದಿರುವ ಜನರ ಅಗತ್ಯತೆಗಳಿಗೆ ಅನುಗುಣವಾಗಿ ಅವಕಾಶವನ್ನು ನೀಡುತ್ತದೆ. ಬಿಸಾಡಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಪೆನ್ನುಗಳು ಸಮಕಾಲೀನ ಮತ್ತು ವಿನ್ಯಾಸದಲ್ಲಿ ಹಗುರವಾಗಿರುತ್ತವೆ ಹಾಗೆಯೇ ನೀವು ಸುಲಭವಾಗಿ ಓದಬಹುದಾದ ಲೇಬಲ್‍ಗಳು ಮತ್ತು ಆಡಿಬಲ್ ಕ್ಲಿಕ್‌(ಕ್ಲಿಕ್ ಮಾಡಿ ವಿವರಣೆಯನ್ನು ಕೇಳುವ)ಗಳನ್ನೊಳಗೊಂಡ ಸ್ಪಷ್ಟವಾದ ಪ್ರಮಾಣವನ್ನು ಹೊಂದಿದೆ, ಇದು ಹಂತ ಹಂತವಾಗಿ ನಿಖರವಾದ ಹೊಂದಾಣಿಕೆಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.

ಇನ್ಸುಲಿನ್ ಆಸ್ಪರ್ಟ್ ಇನ್ಸುಲಿನ್ ಮಾರುಕಟ್ಟೆಗೆ USV ಯ ಕಾಲಿಡುವಿಕೆ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗುತ್ತದೆ. ನಾವು ಮುಂದುವರೆಯು ತ್ತಿದ್ದಂತೆ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸುವ ಮೂಲಕ ಕಂಪನಿಯು ಮತ್ತಷ್ಟು ವಿಸ್ತರಣೆಗೆ ಬದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮಗ್ರ ಪರಿಹಾರಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ.

Leave a Reply

Your email address will not be published. Required fields are marked *