Friday, 13th December 2024

ರೈಲಿನಲ್ಲಿ ಪ್ರಯಾಣಿಕ ಗುಂಡು ಹಾರಿಸಿಕೊಂಡು ಸಾವು

ಗುವಾಹಟಿ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ದೆಹಲಿಗೆ ತೆರಳುತ್ತಿದ್ದ ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕನೊಬ್ಬ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ.

ರೈಲಿನ ಸಾಮಾನ್ಯ ಕಂಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವನ್ನಪ್ಪಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಯಾಣಿಕನ ಬಳಿ ಟಿಕೆಟ್ ಅಥವಾ ಇತರ ಯಾವುದೇ ದಾಖಲೆಗಳಿಲ್ಲ. ನಾವು ಅವರ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಎನ್‌ಎಫ್‌ಆರ್ ವಕ್ತಾರ ಸಬ್ಯಸಾಚಿ ತಿಳಿಸಿದ್ದಾರೆ.

ಫೋರೆನ್ಸಿಕ್ ತನಿಖೆಯನ್ನು ಪ್ರಾರಂಭಿಸಲಾಗಿದೆ. ವ್ಯಕ್ತಿ ಬಂದೂಕನ್ನು ಹಿಡಿದು ಎಲ್ಲಿಂದ ರೈಲಿಗೆ ಹತ್ತಿದನು ಎಂಬುದು ಸ್ಪಷ್ಟವಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.