Friday, 13th December 2024

ಏಥರ್ ಎನರ್ಜಿಯಿಂದ ಸ್ಕೂಟರ್ ರಿಜ್ಟಾ ಬಿಡುಗಡೆ

• ಹರ್ಮನ್ ಕಾರ್ಡನ್ ಸಹಯೋಗದಲ್ಲಿ ಏಥರ್ ನ ಮೊಟ್ಟಮೊದಲ ಸ್ಮಾರ್ಟ್ ಹೆಲ್ಮೆಟ್ ಏಥರ್ ಹ್ಯಾಲೊ ಅನಾವರಣ
• ತನ್ನ ಹೊಚ್ಚಹೊಸ ಓವರ್-ದಿ-ಏರ್ ಸಾಫ್ಟ್ ವೇರ್ ಅಪ್ಡೇಟ್ ಏಥರ್ ಸ್ಟಾಕ್ 6.0 ಬಿಡುಗಡೆ
• ರೂ.1,09,999 ಎಕ್ಸ್-ಶೋರೂಂ ಬೆಲೆ ಹೊಂದಿರುವ ರಿಜ್ಟಾ ದೇಶಾದ್ಯಂತ ಬುಕಿಂಗ್ ಗೆ ಲಭ್ಯ

ಭಾರತದ ಮುಂಚೂಣಿಯ ವಿದ್ಯುಚ್ಛಾಲಿತ ಸ್ಕೂಟರ್ ಉತ್ಪಾದಕರಲ್ಲಿ ಒಬ್ಬರಾದ ಏಥರ್ ಎನರ್ಜಿ ಇಂದು ತನ್ನ ಕುಟುಂಬದ ಸ್ಕೂಟರ್ ರಿಜ್ಟಾ ಅನ್ನು ಬೆಂಗಳೂರಿನಲ್ಲಿ ಏಥರ್ ಕಮ್ಯುನಿಟಿ ಡೇಯ ಎರಡನೇ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಇಡೀ ಕುಟುಂಬಕ್ಕೆ ವಿನ್ಯಾಸಗೊಳಿಸಲಾದ ಮತ್ತು ರೂಪಿಸಲಾದ ರಿಜ್ಟಾ ಅನುಕೂಲ, ಸೌಖ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಇದು ಅಸಂಖ್ಯ ಸಂಪರ್ಕಿತ ವಿಶೇಷತೆಗಳೊಂದಿಗೆ ಬಂದಿದ್ದು ರೈಡಿಂಗ್ ಅನುಭವ ಹೆಚ್ಚಿಸುತ್ತದೆ, ಅದರಲ್ಲಿ ಸ್ಕಿಡ್ ಕಂಟ್ರೋಲ್ ಮತ್ತು ವಾಟ್ಸಾಪ್ ಆನ್ ದಿ ಡ್ಯಾಶ್ ಬೋರ್ಡ್ ಒಳಗೊಂಡಿವೆ. ಸಾಮೂಹಿಕ ಮಾರುಕಟ್ಟೆಗೆ ಸ್ಪರ್ಧಾತ್ಮಕವಾದ ಬೆಲೆ ಇರಿಸ ಲಾಗಿದ್ದು ರೂ.1,09,999(ಎಕ್ಸ್-ಶೋರೂಂ ಬೆಂಗಳೂರು)ಕ್ಕೆ ರಿಜ್ಟಾ ಪ್ರಾರಂಭವಾಗುತ್ತದೆ.

ಹೊಚ್ಚಹೊಸ ರಿಜ್ಟಾ- ರಿಜ್ಟಾ ಎಸ್ ಮತ್ತು ರಿಜ್ಟಾ ಝಡ್ ಅನ್ನು 2.9 ಕೆಡಬ್ಲ್ಯೂಎಚ್ ಬ್ಯಾಟರಿಯಲ್ಲಿ ಮತ್ತು ಟಾಪ್-ಎಂಡ್ ಮಾಡೆಲ್ ರಿಜ್ಟಾ ಝಡ್ ಅನ್ನು 3.7 ಕೆಡಬ್ಲ್ಯೂಎಚ್ 2 ಮಾದರಿಗಳು ಮತ್ತು ಮೂರು ವೇರಿಯೆಂಟ್ ಗಳಲ್ಲಿ ತಂದಿದೆ. 2.9 ಕೆಡಬ್ಲ್ಯೂಎಚ್ ವೇರಿಯೆಂಟ್ ಗಳು ಊಹಿಸಬಲ್ಲ ಐಡಿಸಿ ಶ್ರೇಣಿ 123 ಕಿ.ಮೀ.ಗಳು ಮತ್ತು 3.7 ಕೆಡಬ್ಲ್ಯೂಎಚ್ ವೇರಿಯೆಂಟ್ 160 ಕಿ.ಮೀ.ಗಳನ್ನು ನೀಡುತ್ತದೆ. ಏಥರ್ ರಿಜ್ಟಾ ಎಸ್ ಅನ್ನು 3 ಮಾನೊಟೋನ್ ಬಣ್ಣಗಳಲ್ಲಿ ಒದಗಿಸಿದರೆ ರಿಜ್ಟಾ ಝಡ್ 7 ಬಣ್ಣಗಳಲ್ಲಿ ಲಭ್ಯವಿದ್ದು ಅದರಲ್ಲಿ 3 ಮಾನೊಟೋನ್ ಮತ್ತು 4 ಡ್ಯುಯಲ್ ಟೋನ್ ಬಣ್ಣಗಳಿವೆ.

ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ, “ನಾವು ನಮ್ಮ ಕಾರ್ಯಕ್ಷಮತೆಯ ಸ್ಕೂಟರ್ 450 ಸರಣಿಯೊಂದಿಗೆ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆವು, ಅದನ್ನು ಉದ್ಯಮದಲ್ಲಿ ಗುರುತಿಸಲಾಗಿದೆ. ಈಗ, ನಾವು ಭಾರತೀಯ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ ಮತ್ತು ರೂಪಿಸಿದ ರಿಜ್ಟಾದೊಂದಿಗೆ ಕುಟುಂಬ ವಿಭಾಗಕ್ಕೆ ಕಾಲಿಡುತ್ತಿದ್ದೇವೆ. ಇದು ಸೌಕರ್ಯ, ಸುರಕ್ಷತೆ ಮತ್ತು ಸಂಪರ್ಕಿತ ತಂತ್ರಜ್ಞಾನದಂತಹ ಪ್ರಮುಖ ಅಂಶಗಳ ಮೇಲೆ ಗಮನ ಹರಿಸಿದ್ದು ಇದು ಮಾರುಕಟ್ಟೆಯಲ್ಲಿನ ಸಾಂಪ್ರದಾಯಿಕ ಸ್ಕೂಟರ್ ಗಳಿಂದ ಅಪ್ಗ್ರೇಡ್ ಮಾಡುತ್ತದೆ ಎಂದು ನಾವು ನಂಬುತ್ತೇವೆ. ರಿಜ್ಟಾ ಏಥರ್ನ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಪ್ರತಿಪಾದನೆಯನ್ನು ಪ್ರತಿಬಿಂಬಿಸುತ್ತದೆ” ಎಂದರು.

ಸೌಖ್ಯ ಮತ್ತು ಅನುಕೂಲತೆ

ಏಥರ್ ರಿಜ್ಟಾ ತನ್ನ ಬಳಕೆದಾರರಿಗೆ ಸೌಖ್ಯ ಮತ್ತು ಅನುಕೂಲತೆಯ ಗುರಿ ಹೊಂದಿದ್ದು ಈ ವರ್ಗದಲ್ಲಿ ತನ್ನ ಬಳಕೆದಾರರಿಗೆ ಅತ್ಯಂತ ದೊಡ್ಡ ಸೀಟು ಹಾಗೂ ಫ್ಲೋರ್ ಬೋರ್ಡ್ ಹೊಂದಿದೆ. ಅಲ್ಲದೆ ರಿಜ್ಟಾ ಝಡ್ ಪಿಲಿಯನ್ ನಲ್ಲಿ ಲುಂಬಾರ್ ಸಪೋರ್ಟ್ ಹೊಂದಿದ್ದು ಹೆಚ್ಚಿಸಲಾದ ಸೌಖ್ಯ ನೀಡುತ್ತದೆ. 34 ಎಲ್ ಸೀಟಿನಡಿ ಸಾಮರ್ಥ್ಯ ಹೊಂದಿದ್ದು ಮತ್ತು ಐಚ್ಛಿಕ 22ಲೀ ಫ್ರಂಕ್ ಪರಿಕರಗಳನ್ನು ಒಳಗೊಂಡಂತೆ 56ಲೀ ಸಂಗ್ರಹ ಸ್ಥಳದೊಂದಿಗೆ ರಿಜ್ಟಾ ಸ್ಕೂಟರ್ ಮಾರುಕಟ್ಟೆಯಲ್ಲಿ ದೊಡ್ಡ ಶೇಖರಣಾ ಸ್ಥಳವನ್ನು ನೀಡುತ್ತದೆ.

ಇದು ದಿನನಿತ್ಯದ ಅಗತ್ಯ ವಸ್ತುಗಳನ್ನು ಸಾಗಿಸಲು ಸುಲಭವಾಗುತ್ತದೆ. ಸೀಟಿನಡಿಯ ಸಂಗ್ರಹವನ್ನು 18 ಡಬ್ಲ್ಯೂ ಪವರ್ ಔಟ್ ಪುಟ್ಮೂಲಕ ಐಚ್ಛಿಕ ಬಹುಪಯೋಗಿ ಚಾರ್ಜರ್ನೊಂದಿಗೆ ಜೋಡಿಸಬಹುದು. ಇದು ಫೋನ್ಗಳು, ಟ್ಯಾಬ್ಲೆಟ್ಗಳು, ಪೋರ್ಟಬಲ್ ಸ್ಪೀಕರ್ಗಳು ಮತ್ತು ಇತರ ಅಂತಹುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು.

ಸುರಕ್ಷತೆ ಮತ್ತು ರೈಡ್ ನಿರ್ವಹಣೆ

ಹಲವು ವರ್ಷಗಳಿಂದ ಏಥರ್ ಹಲವು ವಿಶೇಷತೆಗಳನ್ನು ಬಿಡುಗಡೆ ಮಾಡುವ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತಾ ಗುಣಮಟ್ಟವನ್ನು ಸುಧಾರಿಸಲು ಬದ್ಧವಾಗಿದೆ. ರಿಜ್ಟಾ ಜೊತೆಗೆ, ಏಥರ್ ಸ್ಕಿಡ್ ಕಂಟ್ರೋಲ್™ ಅನ್ನು ಪರಿಚಯಿಸಿದೆ. ಇದು ಏಥರ್ನ ಪ್ರೊಪ್ರೈಟರಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಆಗಿದ್ದು ಜಲ್ಲಿ, ಮರಳು, ನೀರು ಅಥವಾ ತೈಲ ಬಿದ್ದ ರಸ್ತೆಯ ತೇಪೆಗಳಲ್ಲಿ ಕಡಿಮೆ ಘರ್ಷಣೆಗೆ ವೇಗ ನೀಡಿ ಎಳೆತದ ನಷ್ಟವನ್ನು ತಪ್ಪಿಸಲು ಮೋಟಾರ್ ಟಾರ್ಕ್ ಅನ್ನು ತಡೆರಹಿತವಾಗಿ ನಿಯಂತ್ರಿಸುತ್ತದೆ.
[ಇದನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಮೋಟಾರು ನಿಯಂತ್ರಣ ವ್ಯವಸ್ಥೆ, ಏಥರ್ ಡ್ರೈವ್ ಕಂಟ್ರೋಲರ್™ (ADC™) ಮೂಲಕ ಸಕ್ರಿಯಗೊಳಿಸಲಾಗಿದೆ).

ಹೆಚ್ಚುವರಿ ಸುರಕ್ಷತೆಯ ವಿಶೇಷತೆಗಳಾದ ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್(ಇ.ಎಸ್.ಎಸ್), ಥೆಫ್ಟ್ ಅಂಡ್ ಟೌ ಡಿಟೆಕ್ಟ್ ಮತ್ತು ಫೈಂಡ್ ಮೈ ಸ್ಕೂಟರ್ ಗಳನ್ನು ಏಥರ್ ನ 450 ಸರಣಿಯ ಸ್ಕೂಟರ್ ಗಳಲ್ಲಿ ಕಾಣಬಹುದಾಗಿದ್ದು ಅವುಗಳನ್ನೂ ಏಥರ್ ರಿಜ್ಟಾದಲ್ಲಿ ಅಳವಡಿಸಲಾಗಿದೆ.

ಎಲ್ಲ ಮೂರು ವೇರಿಯೆಂಟ್ ಗಳು 80 ಕೆಎಂಪಿಎಚ್ ಟಾಪ್ ಸ್ಪೀಡ್ ನೊಂದಿಗೆ ಮತ್ತು ಝಿಪ್ ಮತ್ತು ಸ್ಮಾರ್ಟ್ ಇಕೊ ಎರಡು ರೈಡಿಂಗ್ ಮೋಡ್ ಗಳಲ್ಲಿ ಬರುತ್ತವೆ. ಅಲ್ಲದೆ ರೈಡ್ ಅಸಿಸ್ಟ್ ವಿಶೇಷತೆಗಳಲ್ಲಿ ಮ್ಯಾಜಿಕ್ ಟ್ವಿಸ್ಟ್, ಆಟೊಹೋಲ್ಡ್ ಮತ್ತು ರಿವರ್ಸ್ ಮೋಡ್ ಗಳಿದ್ದು ಅವುಗಳನ್ನು 450 ಸೀರೀಸ್ ನಲ್ಲಿ ಅಳವಡಿಸಲಾಗಿದ್ದು ಅವು ರಿಜ್ಟಾಗಳಲ್ಲೂ ಅಳವಡಿಸಲಾಗಿದೆ.

ರಿಜ್ಟಾ 450 ಸೀರೀಸ್ ಹೊಂದಿರುವ ಅದೇ ತತ್ವವನ್ನು ಹೊಂದಿದ್ದು ಅದರ ಕಡಿಮೆ ಗುರುತ್ವಾಕರ್ಷಣೆ, ಮುಂಬದಿಯಿಂದ ಹಿಂಬದಿಗೆ ಸಮತೋಲನದ ತೂಕ ವಿತರಣೆ ಮತ್ತು ಎರಡೂ ಬದಿಗಳಲ್ಲಿ ಸಮಾನ ಸಮತೋಲನದಿಂದ ರೈಡರ್ ಕೌಶಲ್ಯಗಳ ಮಟ್ಟ ಹೇಗೇ ಇರಲಿ ಅಥವಾ ರೈಡಿಂಗ್ ಸನ್ನಿವೇಶಗಳು ಹೇಗೆಯೇ ಇರಲಿ ನಿಖರ ನಿಯಂತ್ರಣ ನೀಡುತ್ತದೆ. ರಿಜ್ಟಾ ತನ್ನ ಕಿರಿದಾದ 1286ಎಂಎಂ ವ್ಹೀಲ್ ಬೇಸ್ ಮೂಲಕ ತಿರುಗಿಸುವುದು ಸುಲಭವಾಗಿದೆ.

ಹ್ಯಾಲೊ-ಸ್ಮಾರ್ಟ್ ಹೆಲ್ಮೆಟ್
ಏಥರ್ ಸ್ಮಾರ್ಟ್ ಹೆಲ್ಮೆಟ್ ವಿಭಾಗಕ್ಕೆ ತನ್ನ ಏಥರ್ ಹ್ಯಾಲೊ ಉತ್ಪನ್ನ ಸರಣಿ ಮೂಲಕ ಪ್ರವೇಶವನ್ನು ಪ್ರಕಟಿಸಿದೆ. ಏಥರ್ ಹ್ಯಾಲೊ ಪೂರ್ಣ ಮುಖದ, ಟಾಪ್ ಆಫ್ ದಿ ಲೈನ್ ಏಕೀಕೃತ ಸ್ಮಾರ್ಟ್ ಹೆಲ್ಮೆಟ್. ಇದು ಹರ್ಮನ್ ಕಾರ್ಡನ್ ನ ಉನ್ನತ ಗುಣಮಟ್ಟದ ಆಡಿಯೊ ಹೊಂದಿದೆ. ಇದು ರೈಡರ್ ಗಳಿಗೆ ತನ್ನ ಪ್ರೊಪ್ರೈಟರಿ ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನ, ವೈರ್ಲೆಟ್ ಚಾರ್ಜಿಂಗ್ ದಿಂದ ತಡೆರಹಿತ ಅನುಭವ ನೀಡುತ್ತದೆ ಮತ್ತು ಅವರಿಗೆ ಸ್ಕೂಟರ್ ನ ಹ್ಯಾಂಡಲ್ ಬಾರ್ ಮೂಲಕ ಸಂಗೀತ ಮತ್ತು ಕರೆಗಳನ್ನು ನಿಯಂತ್ರಿಸುವ ಅವಕಾಶ ನೀಡುತ್ತದೆ. ಹ್ಯಾಲೊ ಏಥರ್ ಚಿಟ್ ಚಾಟ್TM ನೊಂದಿಗೆ ಬಂದಿದ್ದು ಅದು ಹೆಲ್ಮೆಟ್ ನಿಂದ ಹೆಲ್ಮೆಟ್ ಸಂವಹನವನ್ನು ರೈಡರ್ ಮತ್ತು ಪಿಲಿಯನ್ ನಡುವೆ ಸಾಧ್ಯವಾಗಿಸುತ್ತದೆ. ಇದು ಸ್ವಚ್ಛ ಮತ್ತು ಭವಿಷ್ಯಾತ್ಮಕ ವಿನ್ಯಾಸವಾಗಿದೆ ಮತ್ತು ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಏಥರ್ ಹರ್ಮನ್ ಕಾರ್ಡನ್ ಜೊತೆ ಪಾಲುದಾರಿಕೆ ಹೊಂದಿದ್ದು ಉತ್ತಮ ಗುಣಮಟ್ಟದ ಆಡಿಯೊ ಮೂಲಕ ರೈಡ್ ಅನುಭವ ವನ್ನು ಹೆಚ್ಚಿಸುತ್ತದೆ. ಏಥರ್ ಅನ್ನು ರೈಡರ್ ಗೆ ಪ್ರಮುಖ ಶಬ್ದಗಳನ್ನು ಕೇಳಿಸಲು ಅವಕಾಶ ಕಲ್ಪಿಸುವ ಮೂಲಕ ಹೆಚ್ಚುವರಿ ಸುರಕ್ಷತೆಯ ಪದರ ಸೇರಿಸಿ ವಿನ್ಯಾಸಗೊಳಿಸಲಾಗಿದ್ದು ಇದರಿಂದ ತಡೆರಹಿತ ಮತ್ತು ಸುರಕ್ಷಿತ ಆಲಿಸುವ ಅನುಭವ ನೀಡುತ್ತದೆ.
ಸ್ಕೂಟರ್ನೊಂದಿಗೆ ಹೆಲ್ಮೆಟ್ನ ತಡೆರಹಿತ ಜೋಡಣೆಯನ್ನು ನಂಬುತ್ತದೆ, ಅದರಲ್ಲಿ ವಿಶೇಷವಾಗಿ ರಿಜ್ಟಾದ ಬೂಟ್ ನಲ್ಲಿ ವಿಶೇಷ ವಾಗಿ ರೂಪಿಸಿದ ವೈರ್ ಲೆಸೆ ಚಾರ್ಜಿಂಗ್ ಪರಿಹಾರ ಅಭಿವೃದ್ಧಿಪಡಿಸಿದೆ. ಹ್ಯಾಲೊದ ವೇರ್ ಡಿಟೆಕ್ಟ್ ತಂತ್ರಜ್ಞಾನವು ಹೆಲ್ಮೆಟ್ ಧರಿಸಿದಾಗ ಅದನ್ನು ಗುರುತಿಸಲು ಅನುಮತಿಸುತ್ತದೆ, ಹೆಲ್ಮೆಟ್, ಫೋನ್ ಮತ್ತು ಸ್ಕೂಟರ್ನ ತಡೆರಹಿತ 3 ರೀತಿಯಲ್ಲಿ ಜೋಡಿಸುತ್ತದೆ. ಇದೆಲ್ಲವೂ ಹ್ಯಾಲೊ ಜೊತೆಗೆ ಆಕರ್ಷಕ, ಆನಂದದಾಯಕ ಮತ್ತು ಸುರಕ್ಷಿತ ಸವಾರಿಯನ್ನು ಖಾತ್ರಿಗೊಳಿಸುತ್ತದೆ ಎಂದು ಏಥರ್ ನಂಬುತ್ತದೆ.

ಇದರ ಜೊತೆಗೆ, ಏಥರ್ ಹ್ಯಾಲೋ ಬಿಟ್ ಅನ್ನು ಪರಿಚಯಿಸಿದೆ, ಇದು ಏಥರ್ ನ ಹಾಫ್ ಫೇಸ್ ಹೆಲ್ಮೆಟ್ಗಳಿಗೆ ಜೋಡಿಸಬಹುದಾದ ಮಾದರಿ. ಏಥರ್ ಐಎಸ್ಐ ಮತ್ತು ಡಾಟ್ ಪ್ರಮಾಣೀಕೃತ ಅರ್ಧಮುಖದ ಹೆಲ್ಮೆಟ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಶೀಘ್ರದಲ್ಲೇ ಎಲ್ಲಾ ಗ್ರಾಹಕರಿಗೆ ಲಭ್ಯವಿರುತ್ತದೆ ಮತ್ತು ಹ್ಯಾಲೊಬಿಟ್ ನೊಂದಿಗೆ ಹೊಂದಿಕೊಳ್ಳುತ್ತದೆ, ಪ್ರತಿ ಏಥರ್ ಹೆಲ್ಮೆಟ್ ಅನ್ನು ಸ್ಮಾರ್ಟ್ ಹೆಲ್ಮೆಟ್ ಮಾಡಲು ಅನುವು ಮಾಡಿಕೊಡುತ್ತದೆ. ಹ್ಯಾಲೊ ಪ್ರಾರಂಭಿಕ ಬೆಲೆ ರೂ.12,999 ಮತ್ತು ಹ್ಯಾಲೊಬಿಟ್ ರೂ. 4,999 ಆಗಿದೆ.

ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಸ್ವಪ್ನಿಲ್ ಜೈನ್, “ನಾವು ಹೆಲ್ಮೆಟ್ ಗಳನ್ನು ಕಡ್ಡಾಯಕ್ಕಿಂತ ಮುಖ್ಯವಾಗಿ ಮೋಜಿನ, ಆಕರ್ಷಕವಾದ ಸವಾರಿಯ ಅವಿಭಾಜ್ಯ ಅಂಗವಾಗಿ ಪರಿವರ್ತಿಸಲು ಬಯಸಿದ್ದೇವೆ. ಆದ್ದರಿಂದ ನಾವು ಹ್ಯಾಲೊ ನಿರ್ಮಿಸಿದ್ದೇವೆ, ಇದು ಹರ್ಮನ್ ಕಾರ್ಡನ್ ನಿಂದ ಉನ್ನತ ಗುಣಮಟ್ಟದ ಧ್ವನಿಯನ್ನು ನೀಡುತ್ತದೆ ಮತ್ತು ನಮ್ಮ ಪ್ರೊಪ್ರೈಟರಿ ಆಟೊ ವೇರ್ ಡಿಟೆಕ್ಟ್ ತಂತ್ರಜ್ಞಾನ ಮತ್ತು ವೈರ್ಲೆಸ್ ಚಾರ್ಜಿಂಗ್ ಅನ್ನು ಸಂಯೋಜಿಸುತ್ತದೆ. ಹ್ಯಾಲೊನೊಂದಿಗೆ ನಾವು ಚಿಟ್ ಚಾಟ್ ಮತ್ತು ಮ್ಯೂಸಿಕ್ ಶೇರಿಂಗ್ ನಂತಹ ವಿಶೇಷತೆಗಳನ್ನು ಪಿಲಿಯನ್ಗೆ ಕೂಡಾ ವಿಸ್ತರಿಸುವುದನ್ನು ಖಚಿತಪಡಿಸುತ್ತೇವೆ” ಎಂದರು.

ಏಥರ್ ಸ್ಟಾಕ್ 6.0

ಏಥರ್ ತನ್ನ ಸಾಫ್ಟ್ ವೇರ್ ಸ್ಟಾಕ್ ಗೆ ಅತ್ಯಂತ ದೊಡ್ಡ ಅಪ್ಗ್ರೇಡ್ ಏಥರ್ ಸ್ಟಾಕ್ 6.0 ಬಿಡುಗಡೆ ಮಾಡಿದೆ. ಏಥರ್ ಸ್ಟಾಕ್ ಏಥರ್ ಸ್ಕೂಟರ್ ಗಳಲ್ಲಿನ ಎಲ್ಲ ಅನುಭವಗಳಿಗೆ ಶಕ್ತಿ ನೀಡುತ್ತದೆ, ಇದನ್ನು ಸಾಫ್ಟ್ ವೇರ್, ಫರ್ಮ್ ವೇರ್, ಸಿಸ್ಟಂ ಆಲ್ಗಾರಿದಂಗಳ ಹಲವಾರು ಪರಸ್ಪರ ಸಂಪರ್ಕಿತ ಪದರಗಳ ಮೇಲೆ ನಿರ್ಮಿಸಲಾಗಿದೆ. ಹೊಚ್ಚಹೊಸ ಅಪ್ಡೇಟ್ ಸ್ಕೂಟರ್ ಗಳಿಗೆ ಅಸಂಖ್ಯ ಹೊಸ ವಿಶೇಷತೆಗಳು ಮತ್ತು ಅನುಭವಗಳನ್ನು ತಂದಿದ್ದು ಅದರಲ್ಲಿ ಹೊಸ ಮೊಬೈಲ್ ಆಪ್ ಅನ್ನು ಏಥರ್ ಡ್ಯಾಶ್ ಬೋರ್ಡ್ ಗೆ ವಾಟ್ಸಾಪ್ ಮೂಲಕ ಅಳವಡಿಸಲಾಗಿದೆ, ಲೈವ್ ಲೊಕೇಷನ್ ಶೇರಿಂಗ್, ಪಿಂಗ್ ಮೈ ಸ್ಕೂಟರ್, ಕರೆಗಳಿಗೆ ಆಟೊ ರಿಪ್ಲೈ ಮತ್ತು ಅಲೆಕ್ಸಾ ಅಳವಡಿಕೆ ಸಾಧ್ಯವಾಗಿಸಿದೆ. ಪ್ರಸ್ತುತದ ಏಥರ್ ಮಾಲೀಕರು ಏಥರ್ ಸ್ಟಾಕ್ 6.0 ಕೂಡಾ ಈ ವಿಶೇಷಗಳೊಂದಿಗೆ ಅಪ್ಡೇಟ್ ಪಡೆಯುತ್ತಿದ್ದಾರೆ.

“ನಮ್ಮ ಮೊದಲ ಸ್ಕೂಟರ್ ಬಿಡುಗಡೆಯಾದಾಗಿನಿಂದ ಏಥರ್ ಸ್ಟಾಕ್ ನಮ್ಮ ಉತ್ಪನ್ನ ಕಾರ್ಯತಂತ್ರದ ಅವಿಭಾಜ್ಯ ಅಂಗ ವಾಗಿದ್ದು, ಇದು ನಮ್ಮ ಉತ್ಪನ್ನದ ಅನುಭವವನ್ನು ನಿರಂತರವಾಗಿ ಉನ್ನತೀಕರಿಸಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್ ಆನ್ ಡ್ಯಾಶ್ಬೋರ್ಡ್ ನಂತಹ ಹೊಸ ವೈಶಿಷ್ಟ್ಯಗಳೊಂದಿಗೆ, ಲೈವ್ ಲೊಕೇಷನ್ ಶೇರಿಂಗ್ ಮತ್ತು ವಾಯ್ಸ್ ಕಮ್ಯಾಂಡ್ ಮೂಲಕ ಏಥರ್ ಸ್ಟಾಕ್ 6.0 ರೈಡರ್ ಸುರಕ್ಷತೆ, ಅನುಕೂಲತೆ ಮತ್ತು ಸಂಪರ್ಕಕ್ಕೆ ಪ್ರಮುಖವಾದ ಅಪ್ಗ್ರೇಡ್ ಅನ್ನು ತರುತ್ತದೆ ಎಂದು ನಾವು ನಂಬುತ್ತೇವೆ. ಟಚ್ಸ್ಕ್ರೀನ್ ಡ್ಯಾಶ್ಬೋರ್ಡ್ ಅನ್ನು ಉತ್ತಮಗೊಳಿಸುವುದು ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ನವೀಕರಿಸುವ ಮೂಲಕ ರಿಜ್ಟಾ ಮತ್ತು ಏಥರ್ 450 ಗ್ರಾಹಕರಿಗೆ ತಡೆರಹಿತ ಮಾಲೀಕತ್ವದ ಅನುಭವವನ್ನು ನೀಡುತ್ತದೆ” ಎಂದು ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಸ್ವಪ್ನಿಲ್ ಜೈನ್ ಹೇಳುತ್ತಾರೆ.

ವಾಟ್ಸಾಪ್ ಆನ್ ದಿ ಡ್ಯಾಶ್ ಬೋರ್ಡ್ ಮೂಲಕ ರೈಡರ್ ಈಗ ಡ್ಯಾಶ್ ಬೋರ್ಡ್ ನಲ್ಲಿರುವ ಇತ್ತೀಚಿನ ಸಂದೇಶಗಳನ್ನು ಸ್ಕೂಟರ್ ನಿಂತಿರುವಾಗ ಓದಬಹುದು, ಇದರಿಂದ ರೈಡ್ ಸಮಯದಲ್ಲಿ ತಮ್ಮ ಫೋನ್ ಪರೀಕ್ಷಿಸುವ ಅಡೆತಡೆಯನ್ನು ನಿವಾರಿಸುತ್ತದೆ. ಹೊಸ `ಪಿಂಗ್ ಮೈ ಸ್ಕೂಟರ್ ಫೀಚರ್’ ಏಥರ್ ಮಾಲೀಕರಿಗೆ ಅವರ ಸ್ಕೂಟರ್ ಗಳನ್ನು ಅಪಾರವಾಗಿ ನಿಲ್ಲಿಸ ಲಾದ ಸ್ಕೂಟರ್ ಗಳ ಸಾಗರದ ನಡುವೆ ದೊಡ್ಡ ಧ್ವನಿ ಮತ್ತು ದೃಶ್ಯದ ಸೂಚನೆಗಳೊಂದಿಗೆ ಕಂಡುಕೊಳ್ಳಲು ನೆರವಾಗುತ್ತದೆ, ಅದ್ಮು ಹೊಸ ಏಥರ್ ಆಪ್ ನಲ್ಲಿ ಒಂದು ಗುಂಡಿ ಒತ್ತಿ ಸಕ್ರಿಯಗೊಳಿಸಬಹುದು.

ಏಥರ್ ಸ್ಟಾಕ್ 6.0ದ ಮತ್ತೊಂದು ವಿಶೇಷತೆ ಎಂದರೆ ಅಲೆಕ್ಸಾ ಸ್ಮಾರ್ಟ್ ಅಸಿಸ್ಟೆಂಟ್ ಅಳವಡಿಕೆ, ಅದು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಲಭ್ಯವಿರುವ 50 ಪ್ರಾಂಪ್ಟ್ ಗಳೊಂದಿಗೆ ಬಂದಿದೆ. ರೈಡರ್ ಗಳು ಸದ್ಯದ ಚಾರ್ಜ್ ಸ್ಥಿತಿ, ಕೊನೆಯಲ್ಲಿ ನಿಲ್ಲಿಸಿದ ಸ್ಥ, ಟ್ರಿಪ್ ಸಾಧ್ಯತೆ, ಪುಷ್ ನ್ಯಾವಿಗೇಷನ್ ಮತ್ತಿತರೆ ವಿಶೇಷತೆಗಳನ್ನು ಬರೀ ಧ್ವನಿ ಸೂಚನೆಯ ಮೂಲಕ ಕಂಡುಕೊಳ್ಳಬಹುದು. ಲೈವ್ ಲೊಕೇಷನ್ ಶೇರಿಂಗ್ ಮತ್ತೊಂದು ವಿಶಿಷ್ಟ ಸುರಕ್ಷತೆಯ ವಿಶೇಷತೆಯಾಗಿದ್ದು ಅದು ರೈಡರ್ ಗೆ ಮುಂಚೆಯೇ ನಿಗದಿ ಪಡಿಸಿದ ಸಂಪರ್ಕಕ್ಕೆ ತಮ್ಮ ಲೊಕೇಷನ್ ಕಳುಹಿಸಲು ಅವಕಾಶ ನೀಡುತ್ತದೆ.

ಹೊಚ್ಚಹೊಸ ಮೊಬೈಲ್ ಆಪ್ ಹೆಚ್ಚು ವೈಯಕ್ತಿಕಗೊಳಿಸಿದ ಮತ್ತು ತಡೆರಹಿತ ಅನುಭವವನ್ನು ಏಥರ್ ಗ್ರಾಹಕರಿಗೆ ನೀಡುತ್ತದೆ. ಹೊಸ ಇಂಟರ್ಫೇಸ್ ನೊಂದಿಗೆ ಈ ಆಪ್ ವಿಡ್ಜೆಟ್ ಎಕ್ಸ್ ಎಂಬ ಹೊಸ ವಿಶೇಷತೆ ತಂದಿದ್ದು ಅದು ಬಳಕೆದಾರರಿಗೆ ಹೋಮ್ ಸ್ಕ್ರೀನ್ ಮೇಲೆ ಸಂದರ್ಭೋಚಿತ ಮಾಹಿತಿಯನ್ನು ನೀಡುತ್ತದೆ. ಈ ಆಪ್ ಅವರ ರೈಡ್ ಇತಿಹಾಸ ಕುರಿತು ವಿವರವಾದ ಒಳನೋಟಗಳನ್ನು ನೀಡುತ್ತದೆ, ಅದರಲ್ಲಿ ಇವಿಗೆ ಬದಲಾಗಿದ್ದಕ್ಕೆ ಉಳಿತಾಯ ಮತ್ತು ವಿವಿಧ ಮೈಲಿಗಲ್ಲುಗಳ ಸ್ಮರಣೆ ನೀಡುತ್ತದೆ.

ಎಲ್ಲ ಮೂರು ವೇರಿಯೆಂಟ್ ಗಳು ಏಥರ್ ನ 5 ವರ್ಷಗಳ ಐಚ್ಛಿಕ ವಾರೆಂಟಿ ಕಾರ್ಯಕ್ರಮ `ಏಥರ್ ಬ್ಯಾಟರಿ ಪ್ರೊಟೆಕ್ಟ್’ ನೊಂದಿಗೆ ಬಂದಿದ್ದು ಅದು ಬ್ಯಾಟರಿ ವಾರೆಂಟಿಯನ್ನು 5 ವರ್ಷಗಳು/60,000 ಕಿ.ಮೀ.ಗಳಿಗೆ ವಿಸ್ತರಿಸುತ್ತದೆ. ಈ ವಾರೆಂಟಿ ಕಾರ್ಯಕ್ರಮವು ಬ್ಯಾಟರಿ ವೈಫಲ್ಯಗಳು ಮಾತ್ರವಲ್ಲದೆ 5 ವರ್ಷಗಳ ಅಂತ್ಯದಲ್ಲಿ ಶೇ.70ರಷ್ಟು ಬ್ಯಾಟರಿ ಆರೋಗ್ಯದ ಕನಿಷ್ಠ ಭರವಸೆ ನೀಡುತ್ತದೆ.

ಹೋಮ್ ಚಾರ್ಜಿಂಗ್ ಗೆ ರಿಜ್ಟಾ ಎಸ್ ಮತ್ತು ರಿಜ್ಟಾಝಡ್ 2.9 ಕೆಡಬ್ಲ್ಯೂಎಚ್ ಬ್ಯಾಟರಿಯು 350ಡಬ್ಲ್ಯ ಏಥರ್ ಪೋರ್ಟಬಲ್ ಚಾರ್ಜರ್ ಹೊಂದಿದೆ ಮತ್ತು ಟಾಪ್ ಎಂಡ್ ರಿಜ್ಟಾ ಝಡ್ 3.7 ಕೆಡಬ್ಲ್ಯೂಎಚ್ ಬ್ಯಾಟರಿಯು 700ಡಬ್ಲ್ಯೂ ಹೊಸ ಏಥರ್ ಡ್ಯುಯೊ ಚಾರ್ಜರ್ ನೊಂದಿಗೆ ಬಂದಿದೆ. ರಿಜ್ಟಾ ಮಾಲೀಕರಿಗೆ ಏಥರ್ ನ ಸಮಗ್ರ ಫಾಸ್ಟ್-ಚಾರ್ಜಿಂಗ್ ಜಾಲಕ್ಕೆ ಪ್ರವೇಶ ಲಭ್ಯ ವಿದ್ದು 1800+ಫಾಸ್ಟ್ ಚಾರ್ಜಿಂಗ್ ಪಾಯಿಂಟ್ ಗಳಿವೆ.

ಏಥರ್ ರಿಜ್ಟಾಗೆ ಬುಕಿಂಗ್ ಗಳನ್ನು ತೆರೆಯಲಾಗಿದೆ ಮತ್ತು ಜೂನ್ 2024ಕ್ಕೆ ಡೆಲಿವರಿಗಳು ಪ್ರಾರಂಭವಾಗುತ್ತವೆ. ಏಥರ್ ರಿಜ್ಟಾ ಎಸ್ 2.9 ಕೆಡಬ್ಲ್ಯೂಎಚ್ ಬೆಲೆ ರೂ.1,09,999(ಎಕ್ಸ್-ಶೋರೂಂ ಬೆಂಗಳೂರು) ಹೊಂದಿದೆ. ಏಥರ್ ರಿಜ್ಟಾ ಝಡ್ 2.9ಕೆಡಬ್ಲ್ಯೂಎಚ್ ಮತ್ತು ರಿಜ್ಟಾ 3.7 ಕೆಡಬ್ಲ್ಯೂಎಚ್ ಕ್ರಮವಾಗಿ ರೂ.124,999 ಮತ್ತು ರೂ.144,999ರ ಎಕ್ಸ್-ಶೂರೂಂ ಬೆಂಗಳೂರು ಬೆಲೆಗೆ ಲಭ್ಯವಿವೆ.