ಮುಂಬೈ: ಚಿಪ್ ಡಿಸೈನರ್, ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ನವೀ ಮುಂಬೈನಲ್ಲಿ ಸೈಕ್ಲಿಂಗ್ ಮಾಡುವಾಗ ಹಿಂಬದಿಯಿಂದ ವೇಗವಾಗಿ ಬಂದ ಕ್ಯಾಬ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಮುಂಬೈನ ಚೆಂಬೂರ್ ನಿವಾಸಿ 68 ವರ್ಷದ ಸೈನಿ ಅವರು ನವಿ ಮುಂಬೈನ ನೆರೂಲ್ ಜಂಕ್ಷನ್ ಮತ್ತು ಎನ್‌ಆರ್‌ಐ-ಸೀವುಡ್ಸ್ ಎಸ್ಟೇಟ್ ಸಿಗ್ನಲ್‌ನಲ್ಲಿ ಅಪಘಾತಕ್ಕೀಡಾಗಿದ್ದಾರೆ.
ಅವರು ಸೈಕ್ಲಿಂಗ್ ಉತ್ಸಾಹಿಗಳ ಗುಂಪಿನೊಂದಿಗೆ ಸೈಕ್ಲಿಂಗ್ ಮಾಡುತ್ತಿದ್ದಾಗ, ವೇಗವಾಗಿ ಬಂದ ಕ್ಯಾಬ್ ಅವರಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಅವರನ್ನು ಡಿವೈ ಪಾಟೀಲ್ ಆಸ್ಪತ್ರೆಗೆ ಕರೆದೊಯ್ದರೂ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಅಪಘಾತದ ನಂತರ, ಕ್ಯಾಬ್ ಚಾಲರ ಹೃಷಿಕೇಶ್ ಖಾಡೆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು ಆದರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಸೈನಿ ಅವರ ಪತ್ನಿ ಮೂರು ವರ್ಷಗಳ ಹಿಂದೆ ನಿಧನರಾದರು ಮತ್ತು ಅವರು ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಸಿಸುವ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.
1982 ರಿಂದ 2004 ರವರೆಗೆ ಇಂಟೆಲ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ, ಇಂಟೆಲ್ 386, ಇಂಟೆಲ್ 486, ಪೆಂಟಿಯಮ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಪ್ರೊಸೆಸರ್‌ಗಳ ವಿನ್ಯಾಸದಲ್ಲಿ ಸೈನಿ ಪ್ರಮುಖ ಪಾತ್ರ ವಹಿಸಿದ್ದರು.
‘ಸೈನಿ ಮುಂಬೈನ ವೀರಮಾತಾ ಜೀಜಾಬಾಯಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಎಲೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಮಿನ್ನೇನೋಟ ವಿಶ್ವವಿದ್ಯಾಲಯದಿಂದ ಎಲೆಕ್ನಿ ಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಮೈಕ್ರೋಪ್ರೊಸೆಸರ್ ವಿನ್ಯಾಸಕ್ಕೆ ಸಂಬಂಧಿಸಿದ 7 ಪೇಟೆಂಟ್‌ಗಳನ್ನು ಅವರು ಹೊಂದಿದ್ದಾರೆ.
ಬ್ಯುಸಿನೆನ್ ಅಲ್ಮುಯಿಸ್ಟ್ ಟೆಕ್ನಾಲಜೀನ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಲಕ್ಷ್ಮಿ ವಿಜಯ್ ಸೈಕ್ಲಿಂಗ್ ಮಾಡುವಾಗ ಮೃತಪಟ್ಟ ಒಂದು ವರ್ಷದೊಳಗೆ ಸೈನಿಯವರ ಸಾವು ಸಂಭವಿಸಿದೆ.