Sunday, 13th October 2024

ಅಯೋಧ್ಯೆಯಲ್ಲಿ 4.3 ತೀವ್ರತೆ ಭೂಕಂಪ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ಭೂಕಂಪ ಸಂಭವಿಸಿದೆ.

ಉತ್ತರ ಭಾಗದ 28.36 ಡಿಗ್ರಿ ಅಕ್ಷಾಂಶ ಹಾಗೂ 83.22 ಡಿಗ್ರಿ ರೇಖಾಂಶದಲ್ಲಿ ಭೂಕಂಪನ ವಾಗಿದ್ದು, ಭೂಕಂಪವು 10 ಕಿಮೀ ಆಳದಿಂದ ದಾಖಲಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರ ಭಾಗದಿಂದ 201 ಕಿಮೀ ದೂರದಲ್ಲಿ 10 ಕಿಮೀ ಆಳದಿಂದ 23.36 ಡಿಗ್ರಿ ಅಕ್ಷಾಂಶ ಹಾಗೂ 83.22 ಡಿಗ್ರಿ ರೇಖಾಂಶದಲ್ಲಿ ಭೂಕಂಪ ಸಂಭ ವಿಸಿದೆ” ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

ಉತ್ತರಾಖಂಡದ ಉತ್ತರಾಕ್ಷಿಯಲ್ಲಿ 3.1 ತೀವ್ರತೆಯ ಭೂಕಂಪನ ಸಂಭವಿಸಿದೆ.

ನೇಪಾಳದ ಬ್ಯಾಗ್ಲಂಗ್‌ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಎರಡು ಬಾರಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ಕ್ರಮವಾಗಿ 4.7 ಮತ್ತು 5.3 ದಾಖಲಾಗಿದೆ.