Friday, 13th December 2024

ಡಿ.11 ರಂದು ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳ ರಾಷ್ಟ್ರಕ್ಕೆ ಸಮರ್ಪಣೆ

ವದೆಹಲಿ : ಡಿ.11 ರಂದು ಗೋವಾದಲ್ಲಿ ನಡೆಯಲಿರುವ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್’ನಲ್ಲಿ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಆಯುಷ್ ಸಚಿವ ಸರ್ಬಾ ನಂದ ಸೋನೊವಾಲ್ ತಿಳಿಸಿದ್ದಾರೆ.

ಗೋವಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ (AIIA), ಗಾಜಿಯಾಬಾದ್’ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (NIUM) ಮತ್ತು ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿ ಯೋಪತಿ (NIH) ಎಂಬ ಮೂರು ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.

ಈ ಉಪಗ್ರಹ ಸಂಸ್ಥೆಗಳು ಸಂಶೋಧನೆ, ಅಂತರರಾಷ್ಟ್ರೀಯ ಸಹಯೋಗಗಳನ್ನು ಬಲಪಡಿಸುತ್ತವೆ ಮತ್ತು ದೊಡ್ಡ ಸಮುದಾಯ ಕ್ಕೆ ಕೈಗೆಟುಕುವ ಆಯುಷ್ ಸೇವೆಗಳನ್ನು ಒದಗಿಸುತ್ತವೆ ಎಂದು ಹೇಳಿದೆ.

ಗೋವಾದ ಪಂಜಿಮ್ ನಲ್ಲಿ ನಡೆಯಲಿರುವ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (WAC) ಜಾಗತಿಕ ಮಟ್ಟದಲ್ಲಿ ಆಯುಷ್ ಪದ್ಧತಿಯ ವೈಜ್ಞಾನಿಕತೆ, ಪರಿಣಾಮಕಾರಿತ್ವ, ಶಕ್ತಿಯನ್ನು ಪ್ರದರ್ಶಿಸಲಿದೆ.