ಕೋಲ್ಕತ್ತಾ: ಪಶ್ಚಿಮ ಬಂಗಾಳದ ಶಾಲೆಯೊಂದರ ನೀಡಲಾದ ಮಾದರಿ ಪ್ರಶ್ನೆ ಪತ್ರಿಕೆ ಯಲ್ಲಿ ‘ಆಜಾದ್ ಕಾಶ್ಮೀರ್’ ಎಂದು ನಕ್ಷೆ ಯಲ್ಲಿ ಗುರುತಿಸಲು ಕೇಳಲಾಗಿದೆ ಎಂಬ ವರದಿಗಳ ಬಗ್ಗೆ ವಿವಾದ ಭುಗಿಲೆದ್ದಿದೆ.
10ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆಯ ಚಿತ್ರವೊಂದು ಜಾಲತಾಣಗಳಲ್ಲಿ ಹರಿದಾಡು ತ್ತಿದ್ದು, ರಾಜಕೀಯ ವಿವಾದಕ್ಕೆ ಕಾರಣ ವಾಗಿದೆ. ಇದು ಜಿಹಾದಿ ಪಿತೂರಿ ಎಂದು ಬಿಜೆಪಿ ಹೇಳಿಕೊಂಡಿದೆ.
ಪತ್ರಿಕೆಯಲ್ಲಿ, ವಿದ್ಯಾರ್ಥಿಗಳಿಗೆ ನಕ್ಷೆಯಲ್ಲಿ ಹಲವಾರು ಸ್ಥಳಗಳನ್ನು ಗುರುತಿಸಲು ಕೇಳಲಾಯಿತು. ಅದರಲ್ಲಿ ಪಾಕಿಸ್ತಾನ ಆಕ್ರ ಮಿತ ಕಾಶ್ಮೀರ (ಪಾಕಿಸ್ತಾನದಲ್ಲಿ ‘ಆಜಾದ್ ಕಾಶ್ಮೀರ’ ಎಂದು ಉಲ್ಲೇಖಿಸಲಾಗುತ್ತದೆ) ಗುರುತಿಸಲು ಕೇಳಲಾಗಿತ್ತು. ‘ಆಜಾದ್ ಕಾಶ್ಮೀರ’ ಎಂಬುದು ಪಾಕಿಸ್ತಾನ ಮತ್ತು ಭಯೋತ್ಪಾದಕರು ಪಾಕ್ ಆಕ್ರಮಿತ ಕಾಶ್ಮೀರವನ್ನು ಉಲ್ಲೇಖಿಸಲು ಬಳಸುವ ಪದ ವಾಗಿದೆ.
ವೆಸ್ಟ್ ಬೆಂಗಾಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, WBBSE 10 ನೇ ತರಗತಿಯ ಮಾಡೆಲ್ ಪೇಪರ್ ಅನ್ನು ಭಾರತದ ನಕ್ಷೆಯಲ್ಲಿ ‘ಆಜಾದ್ ಕಾಶ್ಮೀರ’ ಎಂದು ಗುರುತಿಸಲು ವಿದ್ಯಾರ್ಥಿಗಳಿಗೆ ಕೇಳಿದ್ದಕ್ಕಾಗಿ ಕ್ಷಮೆಯಾಚಿಸಿದೆ.