Saturday, 14th December 2024

ಮೇ 8 ರಂದು ಬದರಿನಾಥ ದೇವಾಲಯ ದರ್ಶನ

ಉತ್ತರಾಖಂಡ : ಚಮೋಲಿ ಜಿಲ್ಲೆಯ ಬದರಿನಾಥದ ಪವಿತ್ರ ದ್ವಾರಗಳನ್ನು ಮೇ 8 ರಂದು ತೆರೆಯ ಲಾಗುವುದು ಎಂದು ಇಲ್ಲಿನ ಅರ್ಚಕರು ಶನಿವಾರ ಘೋಷಿಸಿದರು.

ಹಿಂದೂ ದೇವರಾದ ವಿಷ್ಣುವಿಗೆ ಸಮರ್ಪಿತವಾಗಿರುವ ಹಿಮಾಲಯದ ದೇವಾಲಯವನ್ನು ಪ್ರತಿ ವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ ಮತ್ತು ಬೇಸಿಗೆಯ ಆರಂಭದಲ್ಲಿ ತೆರೆಯಲಾಗುತ್ತದೆ.

ಚಳಿಗಾಲದ ಉದ್ದಕ್ಕೂ ಹಿಮದಿಂದ ಕೂಡಿರುತ್ತದೆ. ದೇವಾಲಯದ ದ್ವಾರಗಳನ್ನು ತೆರೆಯುವ ದಿನಾಂಕ ಮತ್ತು ಸಮಯವನ್ನು ಹಿಂದಿನ ತೆಹ್ರಿ ರಾಜ ಮನುಜೇಂದ್ರ ಶಾ ಅವರ ರಾಜ ಪುರೋಹಿತರು ಬಸಂತ್ ಪಂಚಮಿಯ ಸಂದರ್ಭದಲ್ಲಿ ಘೋಷಿಸಿದರು. ಸಂಪ್ರದಾಯಗಳ ಪ್ರಕಾರ ತೆಹ್ರಿ ರಾಜನ ಜಾತಕದ ಆಧಾರದ ಮೇಲೆ ದೇವಾಲಯದ ದ್ವಾರಗಳನ್ನು ತೆರೆಯುವ ದಿನಾಂಕವನ್ನು ನಿರ್ಧರಿಸಲಾಗುತ್ತದೆ.

ದಿನಾಂಕ ಘೋಷಣೆಯಾಗುತ್ತಿದ್ದಂತೆ ಬದರಿನಾಥ ದೇವಾಲಯದ ಅರ್ಚಕರಾದ ರಾವಲ್ ಈಶ್ವರ ಪ್ರಸಾದ್ ನಂಬೂದಿ, ರಾಜೇಶ್ ನಂಬೂದಿರಿ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಉಪಾಧ್ಯಕ್ಷ ಕಿಶೋರ್ ಪನ್ವಾರ್ ಉಪಸ್ಥಿತರಿದ್ದರು.