Wednesday, 11th December 2024

ಅಂತರಾಷ್ಟ್ರೀಯ ವಿಮಾನಗಳ ನಿರ್ಬಂಧ ಫೆಬ್ರವರಿ 28ವರೆಗೆ ವಿಸ್ತರಣೆ

ನವದೆಹಲಿ: ಕರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ಆಗಮನಕ್ಕಿರುವ ನಿರ್ಬಂಧವನ್ನು ಫೆಬ್ರವರಿ 28, 2022ರವರೆಗೆ ವಿಸ್ತರಿಸಲಾಗಿದೆ.

ಕೇಂದ್ರ ವಿಮಾನ ಸಚಿವಾಲಯ ಕರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ನಿರ್ಬಂಧವನ್ನು ಫೆ.28ರವರೆಗೆ ವಿಸ್ತರಣೆ ಮಾಡಿರುವುದದಾಗಿ ತಿಳಿಸಿದೆ.

ಇನ್ನೂ ಡಿಜಿಸಿಎನಿಂದ ಅನುಮತಿ ಪಡೆದ ವಿಶೇಷ ವಿಮಾನಗಳ ಸಂಚಾರಕ್ಕೆ, ಅಂತರಾಷ್ಟ್ರೀಯ ಸರಕು ಸಾಗಾಣಿಕೆ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವು ದಿಲ್ಲ ಎಂಬುದಾಗಿ ಹೇಳಿದೆ.