Wednesday, 11th December 2024

ಮಾ.28, 29ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ

ನವದೆಹಲಿ: ಬ್ಯಾಂಕ್ ನೌಕರರ ಒಕ್ಕೂಟದಿಂದ ಮಾ.28 ಮತ್ತು 29ರಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮಾ.28ರ ಸೋಮವಾರ ಮತ್ತು ಮಾ.29ರ ಮಂಗಳ ವಾರ ಬ್ಯಾಂಕ್ ವ್ಯವಹಾರದಲ್ಲಿ ಗ್ರಾಹಕರಿಗೆ ವ್ಯತ್ಯಯ ಉಂಟಾಗಲಿದೆ.

ದೇಶದ ವಿವಿಧ ಬ್ಯಾಂಕ್ ನೌಕರರ ಸಂಘಟನೆಗಳಿಂದ ಮಾ.28, 29ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೀಗಾಗಿ, ಸತತ ನಾಲ್ಕು ದಿನಗಳು ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದೆ.

ಮಾರ್ಚ್ ಕೊನೆಯ ವಾರದಲ್ಲಿ ಸತತ ನಾಲ್ಕು ದಿನಗಳ ಕಾಲ, ಬ್ಯಾಂಕ್ ನೌಕರರ ಮುಷ್ಕರ ದಿಂದಾಗಿ ಬ್ಯಾಂಕ್ ಗಳು ಮುಚ್ಚಲ್ಪಡ ಲಿವೆ. ವಾರಾಂತ್ಯ ಶನಿವಾರ, ಭಾನುವಾರದ ರಜೆ ಯಿಂದಾಗಿ ಎರಡು ದಿನ ಬ್ಯಾಂಕ್ ಮುಚ್ಚಿದ್ದರೇ, ಮಾ.28, 29ರಂದು ಸೋಮವಾರ ಹಾಗೂ ಮಂಗಳವಾರ ನೌಕರರ ಮುಷ್ಕರದಿಂದಾಗಿ ಬ್ಯಾಂಕ್ ಮುಚ್ಚಿರಲಿವೆ.