Wednesday, 9th October 2024

ಎಲೆಕ್ಟ್ರಾನಿಕ್ ನಿರ್ಬಂಧಿತ ವಸ್ತುಗಳ ಆಮದಿಗೆ ನಿರ್ಬಂಧ

ನವದೆಹಲಿ: ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳ ಆಮದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ವಿಧಿಸಿದೆ.

ಲ್ಯಾಪ್‌ಟಾಪ್ ಮೊದಲಾದವುಗಳ ಆಮದನ್ನು ನಿರ್ಬಂಧಿಸಲಾಗುತ್ತದೆ. ಆಮದು ನಿರ್ಬಂಧಿತ ವಸ್ತುಗಳನ್ನು ನೀವು ಆಮದು ಮಾಡಲು ಬಯಸಿದರೆ ಮಾನ್ಯ ಪರವಾನ ಗಿಯ ಇರಬೇಕಾಗುತ್ತದೆ. ಪರವಾನಗಿ ಇದ್ದರೆ ಮಾತ್ರ ಆಮದಿಗೆ ಅವಕಾಶ ನೀಡಲಾಗು ತ್ತದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

“ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ವೈಯಕ್ತಿಕ ಕಂಪ್ಯೂಟರ್‌ಗಳು, ಎಚ್‌ಎಸ್‌ಎನ್ 8741 ಅಡಿಯಲ್ಲಿ ಬರುವ ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಆಮದನ್ನು ನಿರ್ಬಂಧಿಸಲಾಗಿದೆ. ನಿರ್ಬಂಧಿತ ಆಮದುಗಳಿಗೆ ಮಾನ್ಯ ಪರವಾನಗಿ ಇದ್ದರೆ ಮಾತ್ರ ಆಮದನ್ನು ಅನುಮತಿಸಲಾಗುವುದು,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಅಧಿ ಸೂಚನೆಯಲ್ಲಿ ತಿಳಿಸಿದೆ.

ಬ್ಯಾಗೇಜ್ ನಿಯಮಗಳ ಅಡಿಯಲ್ಲಿ ಮಾಡಲಾಗುವ ಆಮದುಗಳ ಮೇಲೆ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಸಚಿವಾ ಲಯ ಸೇರಿಸಿದೆ.

ಬ್ಯಾಗೇಜ್ ನಿಯಮಗಳು ಭಾರತೀಯ ಗಡಿಯನ್ನು ಪ್ರವೇಶಿಸುವ ಅಥವಾ ಗಡಿಯಿಂದ ಹೊರ ಹೋಗುವ ಪ್ರತಿಯೊಬ್ಬ ಪ್ರಯಾ ಣಿಕರು ಕಸ್ಟಮ್ಸ್ ತಪಾಸಣೆಯ ನಿಯಮವನ್ನು ಒಳಗೊಂಡಿರುತ್ತದೆ.

ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್ ಅಥವಾ ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂ ಟರ್ ಆಮದು ಮಾಡಿಕೊಳ್ಳಲು ಇ-ಕಾಮರ್ಸ್ ಪೋರ್ಟಲ್‌ಗಳಿಂದ ಖರೀದಿಸಿದಂತಹ ಆಮದು ಪರವಾನಗಿ ಇದ್ದರೆ ವಿನಾಯಿತಿ ಇರುತ್ತದೆ. ಆದರೆ ಸುಂಕವನ್ನು ಪಾವತಿ ಮಾಡೆಬೇಕಾಗುತ್ತದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಆರ್‌&ಡಿ, ಟೆಸ್ಟಿಂಗ್, ಚೆಂಚ್‌ ಮಾರ್ಕಿಂಗ್, ರಿಪೇರಿ ಮತ್ತು ಮರು-ರಫ್ತು, ಉತ್ಪನ್ನ ಅಭಿವೃದ್ಧಿ ಕಾರಣದಿಂದಾಗಿ ಆಮದು ಮಾಡಿ ಕೊಳ್ಳುವುದಾದರೆ 20 ವಸ್ತುಗಳನ್ನು ಆಮದು ಮಾಡಲು ಪರವಾನಗಿ ಇದ್ದಲ್ಲಿ ವಿನಾಯಿತಿ ಇದೆ. ಈ ಆಮದು ವಸ್ತುಗಳನ್ನು ತಿಳಿಸ ಲಾದ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು ಮತ್ತು ಮಾರಾಟ ಮಾಡಲಾಗದು ಎಂಬ ಷರತ್ತಿನ ಮೇಲೆ ಮಾತ್ರ ಅನುಮತಿ ನೀಡಲಾಗುತ್ತದೆ.

“ವಿದೇಶದಲ್ಲಿ ರಿಪೇರಿ ಮಾಡಲಾದ ಸರಕುಗಳ ಮರು-ಆಮದು ಮಾಡುವ ಸಂಬಂಧಿತ ನಿರ್ಬಂಧಿತ ಆಮದುಗಳಿಗೆ ಪರವಾನಗಿ ಅಗತ್ಯವಿಲ್ಲ,” ಎಂದು ಅಧಿಸೂಚನೆಯು ಉಲ್ಲೇಖಿಸಿದೆ.