Friday, 13th December 2024

ಬಾಟ್ಲಾಹೌಸ್‌ ಎನ್‌ಕೌಂಟರ್‌: ಅರಿಜ್‌ ಖಾನ್‌’ಗೆ ಇಂದು ಶಿಕ್ಷೆ ಪ್ರಕಟ

ನವದೆಹಲಿ: ಬಾಟ್ಲಾ ಹೌಸ್‌ ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿರುವ ದೆಹಲಿ ನ್ಯಾಯಾಲಯ, ಸೋಮವಾರ ಶಿಕ್ಷೆಯ ಪ್ರಮಾಣದ ತೀರ್ಪು ನೀಡಲಿದೆ.

ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಕೊಲೆ ಮತ್ತು ಇತರ ಅಪರಾಧಗಳಲ್ಲಿ  ಖಾನ್‌ನನ್ನು ತಪ್ಪಿತಸ್ಥ ಎಂದು ಗುರುತಿಸಿದೆ. ‘ಆರೋಪಿಗೆ ಮರಣದಂಡನೆ ನೀಡಬೇಕು’ ಎಂದು ಪೊಲೀಸರ ಪರ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಎ.ಟಿ ಅನ್ಸಾರಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಮಾ.8 ರಂದು ವಿಚಾರಣೆ ನಡೆಸಿದ ನ್ಯಾಯಾಲಯ, ‘ಪೊಲೀಸ್ ಇನ್‌ಸ್ಪೆಕ್ಟರ್‌ ಎಂ.ಸಿ.ಶರ್ಮಾ ಅವರ ಹತ್ಯೆ ಮತ್ತು ಪೊಲೀಸ್‌ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಪ್ರಕರಣಗಳಲ್ಲಿ ಅರಿಜ್‌ ಖಾನ್‌ ಮತ್ತು ಆತನ ಸಹಚರರನ್ನು ತಪ್ಪಿತಸ್ಥ’ ಎಂದು ತೀರ್ಪು ನೀಡಿತ್ತು. 2008ರಲ್ಲಿ ನಡೆದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ದೆಹಲಿಯ ವಿಶೇಷ ಘಟಕದ ಪೊಲೀಸ್ ಇನ್‌ಸ್ಪೆಕ್ಟರ್‌ ಶರ್ಮಾ ಮೃತಪಟ್ಟಿದ್ದರು.