‘ಸದ್ಯ ನಡೆಯುತ್ತಿರುವ ಜೊನೊ ಸಂಜೋಗ್ ಯಾತ್ರೆಯ ನಡುವೆ ಅಭಿಷೇಕ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಸಗರ್ದಿಘಿ ಕ್ಷೇತ್ರದ ಸಾಸಕ ಬೇರೋನ್ ಬಿಶ್ವಾಸ್ ನಮ್ಮ ಪಕ್ಷ ಸೇರಿದ್ದಾರೆ. ಅವರನ್ನು ತುಂಬು ಹೃದಯದಿಂದ ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಆಹ್ವಾನಿಸಿದ್ದೇವೆ.
ಬಿಜೆಪಿಯ ವಿಭಜಿಸುವ ಮತ್ತು ತಾರತಮ್ಯದ ರಾಜಕೀಯದ ವಿರುದ್ಧದ ಹೋರಾಟ ದಲ್ಲಿ ನಿಮ್ಮ ಸರಿಯಾದ ವೇದಿಕೆ ಆಯ್ಕೆ ಮಾಡಿಕೊಂಡಿದ್ದೀರಿ. ಒಟ್ಟಿಗೆ ನಾವು ಗೆಲ್ಲುತ್ತೇವೆ’ ಎಂದು ಟಿಎಂಸಿ ಟ್ವೀಟ್ ಮಾಡಿದೆ.
ಸಗರ್ದಿಘಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಶ್ವಾಸ್ ಗೆಲುವು ದಾಖಲಿಸಿದ್ದರು. 2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಖಾತೆ ತೆರೆಯುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು.