Wednesday, 11th December 2024

ಬಂಗಾಳದ ಸರಕಾರಿ ಕ್ಯಾಲೆಂಡರಿನಲ್ಲಿ ಹಿಂದೂ ಹಬ್ಬಕ್ಕಿಲ್ಲ ರಜೆ

ಕೋಲ್ಕತ್ತಾ: ಬಂಗಾಳದ 2024 ರ ಸರಕಾರಿ ದಿನದರ್ಶಿಕೆಯಲ್ಲಿ ಮಕರಸಂಕ್ರಾಂತಿ ಮತ್ತು ಶ್ರೀ ರಾಮ ನವಮಿ ದಿನದಂದು ಇರುವ ರಜೆಯನ್ನು ರದ್ದುಗೊಳಿಸಲಾಗಿದ್ದು, ‘ಶಬ್-ಎ-ಬರಾತ್’ ಈ ಮುಸ್ಲಿಮರ ಹಬ್ಬಕ್ಕೆ ರಜೆಯನ್ನು ನೀಡಲಾಗಿದೆ.

ರಾಜ್ಯ ವಿಪಕ್ಷದ ನಾಯಕ ಮತ್ತು ಭಾಜಪ ಶಾಸಕ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸುತ್ತಾ, ಮಮತಾ ಬ್ಯಾನರ್ಜಿ ಅವರು ಮುಸ್ಲಿಮರನ್ನು ಬಹಿರಂಗವಾಗಿ ಓಲೈಸಲು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದಲ್ಲಿಯೂ ಶಬ್-ಎ-ಬರಾತ್ ಗೆ ರಜೆಯಿರುವುದಿಲ್ಲ. ಆದರೆ ಮಮತಾ ಬ್ಯಾನರ್ಜಿ ಮಾತ್ರ ಮುಸ್ಲಿಮರ ಮತಗಳಿಗಾಗಿ ಪ್ರಜ್ಞಾಪೂರ್ವಕವಾಗಿ ಓಲೈಕೆಯನ್ನು ಮಾಡುತ್ತಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ನಾಯಕ ಕುನಾಲ್ ಘೋಷ್ ಅವರು ಸರಕಾರವನ್ನು ಬೆಂಬಲಿಸಿ, ರಾಜ್ಯದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಇರಲಿ, ಎಲ್ಲರೂ ಒಟ್ಟಿಗೆ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದು ಹೇಳಿದರು. ದಿನದರ್ಶಿಕೆಯ ಮೂಲಗಳು ಸರ್ಕಾರದ ಸೂತ್ರಗಳಾಗಿದ್ದು, ಭಾಜಪ ಪ್ರಜ್ಞಾಪೂರ್ವಕವಾಗಿ ಅಲ್ಲಿ ಧಾರ್ಮಿಕ ಉನ್ಮಾದ ಹರಡುತ್ತಿದೆ ಎಂದು ಹೇಳಿದ್ದಾರೆ.