Friday, 13th December 2024

Benjamin Netanyahu: ʻನಾಳೆಯೇ ಯುದ್ಧ ನಿಲ್ಲುತ್ತದೆ, ಆದರೆ…ʼ: ಹಮಾಸ್‌ ಉಗ್ರರಿಗೆ ನೆತನ್ಯಾಹು ಖಡಕ್‌ ವಾರ್ನಿಂಗ್‌

benjamin Netanyahu

ಟೆಲ್‌ ಅವಿವ್‌: ಹಮಾಸ್‌ ಉಗ್ರ ಸಂಘಟನೆ ಮುಖ್ಯಸ್ಥ(Hamas chief) ಯಹ್ಯಾ ಸಿನ್ವಾರ್‌(Yahya Sinwar) ಹತ್ಯೆ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು(Benjamin Netanyahu) ಗಾಜಾ ಜನರಿಗೆ ಸಂದೇಶ ರವಾನಿಸಿದ್ದಾರೆ. ಗಾಜಾ ಜನರನ್ನುದ್ದೇಶಿಸಿ ಮಾತನಾಡಿದ ನೆತನ್ಯಾಹು, ಹಮಾಸ್‌ ಉಗ್ರರು ನಮ್ಮ ಎದುರು ಶರಣಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ನಾಳೆಯೇ ಯುದ್ಧ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿರುವ ನೆತನ್ಯಾಹು, ಯಹ್ಯಾ ಸಿನ್ವಾಲ್‌ ಸತ್ತು ಹೋಗಿದ್ದಾನೆ. ಇಸ್ರೇಲ್‌ನ ಧೀರ ಯೋಧರು ನಡೆಸಿದ ದಾಳಿಯಲ್ಲಿ ಆತ ಹತನಾಗಿದ್ದಾನೆ. ಗಾಜಾದಲ್ಲಿ ಇದು ಕೊನೆಯ ಯುದ್ಧ ಅಲ್ಲ. ಇದು ಅಂತ್ಯ ಅಲ್ಲ ಆರಂಭ ಅಷ್ಟೇ. ಗಾಜಾದ ಜನರಿಗೆ ಒಂದು ಸಂದೇಶವಿದೆ. ಹಮಾಸ್‌ ಉಗ್ರರು ಶರಣಾಗತಿಯಾಗಿ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ನಾಳೆಯೇ ಯುದ್ಧ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಗಾಜಾದಲ್ಲಿ ಬರೋಬ್ಬರಿ ಇಸ್ರೇಲ್‌ ಪ್ರಜೆಗಳು ಸೇರಿದಂತೆ 101 ಒತ್ತೆಯಾಳುಗಳು ಹಮಾಸ್‌ ಉಗ್ರರ ವ‍ಶದಲ್ಲಿದ್ದಾರೆ. 23 ದೇಶಗಳ ಪ್ರಜೆಗಳನ್ನು ಹಮಾಸ್‌ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಅವರ ರಕ್ಷಣೆಗೆ ಇಸ್ರೇಲ್‌ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದೆ. ಅವರನ್ನು ಸುರಕ್ಷಿತವಾಗಿ ವಾಪಾಸ್‌ ಕರೆಸಿಕೊಳ್ಳುತ್ತೇವೆ ಎಂಬ ಭರವಸೆ ನಮಗಿದೆ. ಅದರೆ ನಮ್ಮ ಪ್ರಜೆಗಳಿಗೆ ತೊಂದರೆಯಾದರೆ ಇಸ್ರೇಲ್‌ ನಿಮ್ಮನ್ನು ಹುಡುಕಿ ಹುಡುಕಿ ಹೊಡೆದುರುಳಿಸುತ್ತದೆ. ಇರಾನ್‌ ಬೆಳೆಸುತ್ತಿರುವ ಉಗ್ರರ ಸಾಮ್ರಾಜ್ಯ ನಮ್ಮ ಕಣ್ಣೆದುರೇ ಧ್ವಂಸವಾಗುತ್ತಿದೆ ಎಂದು ಎಚ್ಚರಿಕೆ ನೀಡಿದೆ.

ಇದೇ ವೇಳೆ ನೆತನ್ಯಾಹು, ಹಸನ್‌ ನಸ್ರಲ್ಲಾ ಸೇರಿದಂತೆ ಹೆಜ್ಬುಲ್ಲಾ ಉಗ್ರ ಸಂಘಟನೆ ಮುಖಂಡರ ಹತ್ಯೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ್ದು, ನಸ್ರಲ್ಲಾ, ಮೊಹ್ಸೆನ್, ಹನಿಯೆ ಸೇರಿದಂತೆ ಹಲವು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇನ್ನು ಮೇಲೆ ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಜನರ ಮೇಲೆ ಹೇರಿದ ಭಯೋತ್ಪಾದನೆಯ ಆಳ್ವಿಕೆ, ಸಹ ಕೊನೆಗೊಳ್ಳುತ್ತದೆ. ಮಧ್ಯಪ್ರಾಚ್ಯದಲ್ಲಿ ಸಮೃದ್ಧಿ ಮತ್ತು ಶಾಂತಿಯ ಭವಿಷ್ಯವನ್ನು ಬಯಸುವ ಎಲ್ಲರೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗಬೇಕು ಎಂದು ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ: ಬಾಂಗ್ಲಾದೇಶಕ್ಕಾಗಿ ಹೋರಾಡುತ್ತಿದ್ದ ಅವರನ್ನು ಓಲ್ಡ್ ಬಿಚ್ ಅಂದಿದ್ದರು !