Wednesday, 11th December 2024

ಭಾರತ್ ಜೋಡೋ ಯಾತ್ರೆ: ತಮಿಳುನಾಡು ರೈತರೊಂದಿಗೆ ರಾಗಾ ಸಂವಾದ

ಚೆನ್ನೈ: ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯ ಮೂರನೇ ದಿನ ಶುಕ್ರವಾರ ತಮಿಳುನಾಡಿನ ನಾಗರ್‍ಕೋಯಿಲ್‍ನಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ದರು.

ಯಾತ್ರೆಯ ಮೂರನೇ ದಿನ ರಾಹುಲ್ ಗಾಂಧಿ ಅವರು, ಜಂತರ್‍ಮಂತರ್‍ನಲ್ಲಿ ತಲೆಬುರುಡೆಯೊಂದಿಗೆ ಪ್ರತಿಭಟನೆ ನಡೆಸಿದ್ದ ತಮಿಳುನಾಡಿನ ರೈತರೊಂದಿಗೆ ಸಂವಾದ ನಡೆಸಿದರು.

ಗುರುವಾರ 13 ಕಿಮೀ ವ್ಯಾಪ್ತಿಯನ್ನು ಕ್ರಮಿಸಿದ್ದ ಕಾಂಗ್ರೆಸ್ ಯಾತ್ರೆ ತಮಿಳುನಾಡಿನ ಸುಚಿಂದ್ರಂನಲ್ಲಿರುವ 101 ವರ್ಷಗಳ ಹಳೆಯದಾದ ಶಾಲೆಯಲ್ಲಿ ಮೊದಲ ನಿಲುಗಡೆಗೊಂಡಿತು. ಈ ವೇಳೆ ರಾಹುಲ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಅನಿತಾ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ರಾಹುಲ್ ಅವರ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಇದು 3,500 ಕಿಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.