Monday, 9th December 2024

ಹಿಮಾಚಲ ಪ್ರದೇಶ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

ಶಿಮ್ಲಾ: ಪಂಜಾಬಿನಲ್ಲಿ ಆರು ದಿನಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ಹಿಮಾಚಲ ಪ್ರದೇಶಕ್ಕೆ ಪ್ರವೇಶಿಸಿತು.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪಕ್ಷದ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಇತರ ಪಕ್ಷದ ನಾಯಕರು ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು. ಗಡಿ ಗ್ರಾಮವಾದ ಘತೋಟದಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು. ರಾಹುಲ್ ಗಾಂಧಿ ಮಾತ ನಾಡಿ, ‘ಯಾತ್ರೆ ಹಿಮಾಚಲ ಪ್ರದೇಶದ ಮೂಲಕ ಹಾದು ಹೋಗಬೇಕೆಂದು ನೀವು ಕೇಳಿದ್ದೀರಿ. ಹೀಗಾಗಿಯೇ ನಾವು ಸಂಪೂರ್ಣ ಮಾರ್ಗವನ್ನು ಬದಲಾಯಿಸಿದ್ದೇವೆ. ಹಿಮಾಚಲ ಪ್ರದೇಶಕ್ಕೆ ಸ್ವಲ್ಪ ಸಮಯ ಕೊಟ್ಟಿದ್ದೇವೆ. ಮಹಾತ್ಮಾ ಗಾಂಧಿಯವರ ಪುಣ್ಯ ತಿಥಿಯಾದ ಜನವರಿ 30 ರಂದು ಯಾತ್ರೆಯು ಶ್ರೀನಗರ ವನ್ನು ತಲುಪಬೇಕು ಎಂದು ಹೇಳಿದರು.

ಪ್ರತಿಭಾ ಸಿಂಗ್, ದೇವ ಭೂಮಿಯಲ್ಲಿ ವಿಜಯ ಪ್ರಾರಂಭವಾಗಿದೆ ಮತ್ತು ಅದೇ ರೀತಿ ನಾವು ಪ್ರತಿ ರಾಜ್ಯದಲ್ಲೂ ಕಾಂಗ್ರೆಸ್ ಧ್ವಜವನ್ನು ಹಾರಿಸುತ್ತೇವೆ ಎಂದು ಹೇಳಿದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಮೆರವಣಿಗೆ ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.

Read E-Paper click here