ನವದೆಹಲಿ: ಪ್ರತಿ ಕೆಜಿಗೆ 29 ರೂ.ಗಳ ಸಬ್ಸಿಡಿ ದರದಲ್ಲಿ ʻಭಾರತ್ ಅಕ್ಕಿ’ಯನ್ನು ಮಂಗಳವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ. ಸಬ್ಸಿಡಿ ಅಕ್ಕಿ 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.
ಕಳೆದ ಒಂದು ವರ್ಷದಲ್ಲಿ ಧಾನ್ಯದ ಚಿಲ್ಲರೆ ಬೆಲೆಯಲ್ಲಿ ಶೇ.15ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆಯಿಂದ ತುಸು ಪರಿಹಾರ ನೀಡಲು ಸರ್ಕಾರ ಇದನ್ನು ಒದಗಿಸುತ್ತಿದೆ.
ಆಹಾರ ಸಚಿವ ಪಿಯೂಷ್ ಗೋಯಲ್ ಅವರು, ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತ್ ಅಕ್ಕಿ ವಿತರಣೆಯನ್ನು ಪ್ರಾರಂಭಿಸದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದರ ಮೊದಲ ಹಂತದಲ್ಲಿ ಭಾರತೀಯ ಆಹಾರ ನಿಗಮವು ಎರಡು ಸಹಕಾರಿ ಸಂಸ್ಥೆಗಳಾದ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆ ಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಚಿಲ್ಲರೆ ಸರಪಳಿ ಕೇಂದ್ರೀಯ ಭಂಡಾರ್‌ಗೆ 5 ಲಕ್ಷ ಟನ್ ಅಕ್ಕಿಯನ್ನು ನೀಡುತ್ತದೆ.
ಈ ಏಜೆನ್ಸಿಗಳು ಅಕ್ಕಿಯನ್ನು 5 ಕೆಜಿ ಮತ್ತು 10 ಕೆಜಿಗಳಲ್ಲಿ ಪ್ಯಾಕ್ ಮಾಡುತ್ತವೆ ಮತ್ತು “ಭಾರತ್” ಬ್ರಾಂಡ್‌ನ ಅಡಿಯಲ್ಲಿ ತಮ್ಮ ಔಟ್‌ಲೆಟ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡುತ್ತವೆ. ಅಕ್ಕಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಮಾರಾಟ ಮಾಡಲಾಗುತ್ತದೆ.
ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಮೂಲಕ ಅದೇ ದರದಲ್ಲಿ ಬೃಹತ್ ಬಳಕೆದಾರರಿಗೆ ಅಕ್ಕಿಯನ್ನು ಮಾರಾಟ ಮಾಡಲು ಮುಂದಾದಾಗ ದೊರೆತ ನೀರಸ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಸರ್ಕಾರ FCI ಅಕ್ಕಿಯ ಚಿಲ್ಲರೆ ಮಾರಾಟವನ್ನು ಆಶ್ರಯಿಸಿದೆ.
ಅದೇ ಏಜೆನ್ಸಿಗಳ ಮೂಲಕ ಭಾರತ್ ಚನ್ನಾ ಕೆ.ಜಿಗೆ 27.50 ರೂ.ಗೆ ಮತ್ತು ʼಭಾರತ್ ಅಟ್ಟʼ ಕೆಜಿಗೆ 60 ರೂ.ಗೆ ಮಾರಾಟವಾಗುತ್ತಿವೆ. ಅವುಗಳಿಗೆ ಸಿಗುತ್ತಿರು ವಂತೆಯೇ ʼಭಾರತ್ ಅಕ್ಕಿʼಗೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಸರ್ಕಾರ ಆಶಿಸಿದೆ.