Wednesday, 11th December 2024

ಅಸ್ಸಾಂ ಪ್ರವೇಶಿಸಿದ ಭಾರತ್ ಜೋಡೊ ನ್ಯಾಯ ಯಾತ್ರೆ

ಶಿವಸಾಗರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ಅಸ್ಸಾಂಗೆ ಪ್ರವೇಶಿಸಿದೆ.

ನಾಗಾಲ್ಯಾಂಡ್‌ನಿಂದ ಶಿವಸಾಗರ್‌ನ ಹಲುವತಿಂಗ್‌ ಮೂಲಕ ಅಸ್ಸಾಂಗೆ ಪ್ರವೇಶಿಸಿದೆ. ನಾಗಾಲ್ಯಾಂಡ್‌ನ ತುಲಿಯಿಂದ ಬಸ್‌ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಬೆಳಿಗ್ಗೆ ಸುಮಾರು 9.45ರ ವೇಳೆಗೆ ಅಸ್ಸಾಂ ಪ್ರವೇಶಿಸಿದರು.

ಹಲುವತಿಂಗ್‌ನಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಬರಮಾಡಿಕೊಂಡರು. ಅಸ್ಸಾಂ ಕಾಂಗ್ರೆಸ್‌ ನಾಯಕರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಲಾಯಿತು. ಒಟ್ಟು 8 ದಿನಗಳ ಕಾಲ ಅಸ್ಸಾಂನಲ್ಲಿ ಯಾತ್ರೆ ನಡೆಯಲಿದೆ.

ಜ.25ರ ವರೆಗೂ ಅಸ್ಸಾಂನಲ್ಲಿ ಯಾತ್ರೆ ನಡೆಯಲಿದೆ.