Monday, 16th September 2024

ಭಾರತವನ್ನು ‘ಜಾಗತಿಕ ರಫ್ತು ಕೇಂದ್ರ’ವಾಗಿ ಪರಿವರ್ತಿಸುತ್ತೇವೆ

ವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಜಾಗತಿಕ ಜವಳಿ ಕಾರ್ಯಕ್ರಮ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸುವ ಮೂಲಕ ಭಾರತವನ್ನು ಜಾಗತಿಕ ರಫ್ತು ಕೇಂದ್ರವಾಗಿ ಪರಿವರ್ತಿಸುವ ಪ್ರತಿಜ್ಞೆಯನ್ನು ಮಾಡಿದರು.

“ನಾವು ಭಾರತವನ್ನು ‘ಜಾಗತಿಕ ರಫ್ತು ಕೇಂದ್ರ’ವಾಗಿ ಪರಿವರ್ತಿಸುತ್ತೇವೆ ಎಂಬ ದೃಢವಾದ ನಂಬಿಕೆ ನಮಗಿದೆ.

ನಾವು ವೋಕಲ್ ಫಾರ್ ಲೋಕಲ್ ಗೆ ಮತ್ತೊಂದು ಹೊಸ ಆಯಾಮವನ್ನು ಸೇರಿಸಿದ್ದೇವೆ. ಇಂದು, ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಟು ಗ್ಲೋಬಲ್ ನ ಸಾರ್ವಜನಿಕ ಆಂದೋಲನಗಳು ಇಡೀ ದೇಶದಲ್ಲಿ ನಡೆಯುತ್ತಿವೆ” ಎಂದು ಪ್ರಧಾನಿ ಮೋದಿ ಜವಳಿ ಕಾರ್ಯಕ್ರಮ ವನ್ನುದ್ದೇಶಿಸಿ ಮಾತ ನಾಡುತ್ತಾ ಹೇಳಿದರು.

“ಮುಂದಿನ 25 ವರ್ಷಗಳಲ್ಲಿ ಭಾರತವನ್ನು ‘ವಿಕ್ಷಿತ ರಾಷ್ಟ್ರ’ವನ್ನಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ವಿಕ್ಷಿತ್ ಭಾರತದ ನಾಲ್ಕು ಪ್ರಮುಖ ಆಧಾರ ಸ್ತಂಭಗಳೆಂದರೆ ಬಡವರು, ಯುವಕರು, ರೈತರು ಮತ್ತು ಮಹಿಳೆಯರು. ಮತ್ತು ಗಮನಾರ್ಹವಾಗಿ, ಭಾರತದ ಜವಳಿ ವಲಯವು ಈ ಎಲ್ಲ ಸ್ತಂಭ ಗಳೊಂದಿಗೆ ಸಂಪರ್ಕ ಹೊಂದಿದೆ” ಎಂದು ಪ್ರಧಾನಿ ಹೇಳಿದರು.

ಸರ್ಕಾರದ ನಿರಂತರ ಪ್ರಯತ್ನಗಳು ಭಾರತದ ಜವಳಿ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಹೆಚ್ಚಿಸಲು ಕಾರಣವಾಗುತ್ತಿವೆ ಎಂದು ಪ್ರಧಾನಿ ಹೇಳಿದರು. ಇಂದು ಜವಳಿ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) 2014 ಕ್ಕಿಂತ ಮೊದಲು ದ್ವಿಗುಣಗೊಂಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *