Wednesday, 11th December 2024

ಹರಿದ ಜೀನ್ಸ್ ಪ್ಯಾಂಟ್ ಧರಿಸಬೇಡಿ ಎಂದಿದ್ದ ಸಿಎಂಗೆ ಬಚ್ಚನ್‌ ಮೊಮ್ಮಗಳ ತಿರುಗೇಟು

ಮುಂಬೈ : ಹರಿದ ಜೀನ್ಸ್ ಪ್ಯಾಂಟ್ ಧರಿಸಬೇಡಿ ಎಂದಿದ್ದ ಉತ್ತರಾಖಂಡ್​ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಅವರಿಗೆ ಬಾಲಿ ವುಡ್ ನಟ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ಉತ್ತರಾಖಂಡ್ ಸಿಎಂ ತಿರತ್​ ಸಿಂಗ್​ ರಾವತ್​ ಅವರು ‘ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್​ ಧರಿಸಿ ಮೊಣಕಾಲು ತೋರಿಸು ತ್ತಾರೆ. ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನ ಗೌರವಿಸಿ ಅದನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವಾಗ ನಾವು ಪಾಶ್ಚಾತ್ಯರನ್ನು ಅನುಸರಿಸುತ್ತಿದ್ದೇನೆ ಎಂದಿದ್ದರು.

ಮುಖ್ಯಮಂತ್ರಿ ಹೇಳಿಕೆಗೆ ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದೀಗ ಅಮಿತಾಭ್​ ಬಚ್ಚನ್​ ಮೊಮ್ಮಗಳು ನವ್ಯಾ ಕೂಡ ತಿರತ್​ ಸಿಂಗ್​ ರಾವತ್​ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ನಮ್ಮ ಬಟ್ಟೆಯನ್ನು ಬದಲಿಸುವು ದಕ್ಕಿಂತ ಮುಂಚೆ ನೀವು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ’ ಎಂದು ಮೊನಚಾದ ಮಾತುಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಇಂಥ ಹೇಳಿಕೆಗಳ ಮೂಲಕ ಸಮಾಜಕ್ಕೆ ಸಂದೇಶ ರವಾನಿಸುವುದು ಅಘಾತಕಾರಿ ಅಂಶ ಎಂದು ನವ್ಯಾ ಹೇಳಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಹೆಣ್ಣು ಮಕ್ಕಳು ಜೀನ್ಸ್ ಪ್ಯಾಂಟ್ ಧರಿಸದಂತೆ ನಿರ್ಬಂಧ ಹೇರಿ ಅಲ್ಲಿಯ ಸ್ಥಳೀಯ ಪಂಚಾಯತ್ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.