Wednesday, 11th December 2024

Bigg Boss 18: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಉರ್ಫಿ ಸಹೋದರಿ?

Bigg Boss 18

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಉರ್ಫಿ ಜಾವೇದ್ (Urfi Javed) ಈಗ ತಮ್ಮ ಸಹೋದರಿಯ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇವರ ಸಹೋದರಿ ಊರುಸಾ ಜಾವೇದ್ (Uruusa Javed) ಬಿಗ್ ಬಾಸ್ (Bigg Boss 18) ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ.

ಕರಣ್ ಜೋಹರ್ ನಿರೂಪಿಸಿದ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಜಾವೇದ್ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದು ಮಾತ್ರವಲ್ಲ ಸಾಕಷ್ಟು ಅಭಿಮಾನಿಗಳು, ಅನುಯಾಯಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಉರ್ಫಿ ಅವರು ಫಾಲೋ ಕರ್ ಲೋ ಯಾರ್ ಶೋನಲ್ಲಿ ತಮ್ಮ ಕುಟುಂಬವನ್ನು ಅಭಿಮಾನಿಗಳಿಗೆ ಪರಿಚಯಿಸಿದರು.

ಇದರ ಜನಪ್ರಿಯತೆ ನೋಡಿ ಉರ್ಫಿ ಸಹೋದರಿಯರಾದ ಆಸ್ಫಿ ಮತ್ತು ಉರುಸಾ ಅವರು ಸಲ್ಮಾನ್ ಖಾನ್ ನಿರೂಪಿಸುವ ಬಿಗ್ ಬಾಸ್ 18 ರ ಭಾಗವಾಗುತ್ತಾರೆ ಎನ್ನಲಾಗುತ್ತಿದೆ. ಆದರೆ ಅಸ್ಫಿ ಅವರು ಇದನ್ನು ನಿರಾಕರಿಸಿದ್ದು, ಉರುಸಾ ಈವರೆಗೆ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಉರುಸಾ ಬಿಗ್ ಬಾಸ್ 18 ರ ಭಾಗವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಊರುಸಾ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ವಿಚಾರ ಇನ್ನೂ ಅಂತಿಮಗೊಳಿಸಲಾಗಿಲ್ಲ. ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಊರುಸಾ ಬಿಗ್ ಬಾಸ್ ಮನೆಗೆ ಬಂದರೆ ಅವರು ಉರ್ಫಿಯಂತೆ ಎಲ್ಲರ ಗಮನ ಸೆಳೆಯಬಹುದು. ಫಾಲೋ ಕರ್ ಲೋ ಯಾರ್‌ನಲ್ಲಿ ಅವರು ಉರ್ಫಿಯಂತೆಯೇ ತಮ್ಮ ವರ್ತನೆಯಿಂದ ಎಲ್ಲರ ಗಮನ ಸೆಳೆದಿದ್ದರು. ಜಾವೇದ್ ಒಡಹುಟ್ಟಿದವರಲ್ಲಿ ಉರುಸಾ ಹಿರಿಯರು. ಉರ್ಫಿ ಖ್ಯಾತಿಯ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಊರುಸಾ ಪ್ರಸ್ತುತ ಇನ್ ಸ್ಟಾ ಗ್ರಾಮ್ ನಲ್ಲಿ 132 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಇವರು ಆಗಾಗ್ಗೆ ತಮ್ಮ ಸಹೋದರಿಯರೊಂದಿಗೆ ಮೋಜಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈ ನಡುವೆ ನಿಯಾ ಶರ್ಮಾ ಅವರನ್ನು ಬಿಗ್ ಬಾಸ್ 18ರ ಮೊದಲ ಸ್ಪರ್ಧಿ ಎಂದು ಖಚಿತಪಡಿಸಲಾಗಿದೆ. ನಿಯಾ ಇತ್ತೀಚೆಗೆ ಖತ್ರೋನ್ ಕೆ ಖಿಲಾಡಿ 14 ರ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ರೋಹಿತ್ ಶೆಟ್ಟಿ ಅವರನ್ನು ಸಲ್ಮಾನ್ ಖಾನ್ ಅವರ ಶೋನಲ್ಲಿ ಮೊದಲ ಸ್ಪರ್ಧಿ ಎಂದು ಘೋಷಿಸಿದ್ದರು. ʼಖತ್ರೋನ್ ಕೆ ಕಿಲಾಡಿ 14ʼರ ವಿಜೇತ ನಟ ಕರಣ್ ವೀರ್ ಮೆಹ್ರಾ ಅವರು ಮುಂದಿನ ಬಿಗ್ ಬಾಸ್ 18ರಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎನ್ನುವ ಕುರಿತು ಪ್ರಶ್ನಿಸಿದಾಗ ಈ ಬಗ್ಗೆ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು.

‌45 Movie: ʼ45ʼ ಸಿನಿಮಾ ಶೂಟಿಂಗ್ ಮುಕ್ತಾಯ; ಉಪೇಂದ್ರ ಜತೆ ನಟಿಸಲು ಯಾವಾಗಲೂ ಸಿದ್ಧ ಎಂದ ಶಿವಣ್ಣ

ಸಲ್ಮಾನ್ ಖಾನ್ ನಿರೂಪಿಸುವ ಬಿಗ್ ಬಾಸ್ 18 ಅಕ್ಟೋಬರ್ 6 ರಂದು ಪ್ರೀಮಿಯರ್ ಆಗಲಿದೆ. ಅರ್ಜುನ್ ಬಿಜ್ಲಾನಿ, ದಿಗ್ವಿಜಯ್ ರಾಠೀ, ನೈರಾ ಬ್ಯಾನರ್ಜಿ, ಧೀರಜ್ ಧೂಪರ್, ಶಿಲ್ಪಾ ಶಿರೋಡ್ಕರ್ ಮತ್ತು ಶೋಯೆಬ್ ಇಬ್ರಾಹಿಂ ಕೂಡ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.