Friday, 13th December 2024

Bihar Horror: ಗ್ಯಾಂಗ್‌ರೇಪ್‌ಗೆ ಯತ್ನ; ವೈದ್ಯನ ಮರ್ಮಾಂಗವನ್ನೇ ಬ್ಲೇಡ್‌ಯಿಂದ ಕತ್ತರಿಸಿದ ನರ್ಸ್‌!

Bihar Horror

ಭುವನೇಶ್ವರ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata doctor murder) ಮಾಸುವ ಮುನ್ನವೇ ಅಂತಹದ್ದೇ ಒಂದು ಘಟನೆ ಬಿಹಾರ(Bihar Horror)ದಲ್ಲಿ ನಡೆದಿದೆ. ಬಿಹಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಮೇಲೆ ಸಾಮೂಹಿಕ ಅತ್ಯಾಚಾರ(Attempt to Rape)ದ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಬ್ಲೇಡ್‌ನಿಂದ ಕಿಡಿಗೇಡಿ ವೈದ್ಯನ ಮರ್ಮಾಂಗವನ್ನೇ ಕತ್ತರಿಸಿ ಆಕೆ ಅಪಾಯದಿಂದ ತಪ್ಪಿಸಿಕೊಂಡಿದ್ಧಾಳೆ.

ಏನಿದು ಘಟನೆ?

ಸಮಸ್ತಿಪುರ ಜಿಲ್ಲೆಯ ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರದಲ್ಲಿ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಡಾಕ್ಟರ್‌ ಸಂಜಯ್‌ ಎಂಬಾತ ಇಬ್ಬರು ಸಹಾಯಕರ ಜತೆಗೂಡಿ ಕರ್ತವ್ಯದಲ್ಲಿದ್ದ ನರ್ಸ್‌ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕರ್ತವ್ಯ ನಿರತರಾಗಿದ್ದ ನರ್ಸ್‌ ಮೇಲೆ ಈ ಮೂವರು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಂತೆ ಮಹಿಳೆ ತಪ್ಪಿಕೊಳ್ಳಲು ಯತ್ನಿಸಿದ್ದಾಳೆ. ಆದರೆ ಮೂವರು ಆರೋಪಿಗಳು ಆಕೆಯ ಮೇಲೆ ದಾಳಿ ನಡೆಸಿದ್ದರು. ಕೊನೆಗೆ ಬ್ಲೇಡ್‌ನಿಂದ ವೈದ್ಯನ ಗುಪ್ತಾಂಗವನ್ನೇ ಕತ್ತರಿಸಿದ್ದಾಳೆ. ಆಮೇಲೆ ಅಲ್ಲಿಂದ ತಪ್ಪಿಸಿಕೊಂಡು ಓಡಿ, ಪೊಲೀಸರಿಗೆ ಕರೆ ಮಾಹಿತಿ ಮಾಹಿತಿ ಕೊಟ್ಟಿದ್ದಾಳೆ.

ಇನ್ನು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದ್ದಾರೆ ಆರೋಪಿಗಳಾದ ಡಾ.ಸಂಜಯ್‌ ಕುಮಾರ್‌, ಅವಧೇಶ್‌ ಕುಮಾರ್‌ ಮತ್ತು ಸುನಿಲ್‌ ಕುಮಾರ್‌ ಗುಪ್ತಾ ಎಂದು ಗುರುತಿಸಿದ್ದು, ಈ ಮೂವರನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ನರ್ಸ್‌ ಅನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ನರ್ಸ್ ತೋರಿದ ಧೈರ್ಯಕ್ಕೆ ಶ್ಲಾಘನೆ

ನರ್ಸ್ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಲು ಪ್ರಯತ್ನಿಸುವ ಮೊದಲು ಕಿಡಿಗೇಡಿಗಳು ಅಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿ, ಆಸ್ಪತ್ರೆಗೆ ಒಳಗಿನಿಂದ ಬೀಗ ಹಾಕಿದ್ದರು ಎಂದು ಡಿಎಸ್ಪಿ ಕುಮಾರ್ ಹೇಳಿದ್ದಾರೆ. ಇನ್ನು ಸಂತ್ರಸ್ತ ನರ್ಸ್‌ ಧೈರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು. ಆವರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿದಾಗ ಪೊಲೀಸರು ನರ್ಸ್ ಬಳಸಿದ್ದ ಬ್ಲೇಡ್, ರಕ್ತಸಿಕ್ತ ಬಟ್ಟೆ, ಮದ್ಯದ ಬಾಟಲಿ ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೂ ಮುನ್ನ ಮೂವರು ವ್ಯಕ್ತಿಗಳು ಮದ್ಯಪಾನ ಮಾಡಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: MP Horror: ಪಿಕ್‌ನಿಕ್‌ಗೆ ತೆರಳಿದ್ದ ಸೇನೆಯ ಇಬ್ಬರು ಅಧಿಕಾರಿಗಳ ಮೇಲೆ ಡೆಡ್ಲಿ ಅಟ್ಯಾಕ್‌; ಜತೆಗಿದ್ದ ಸ್ನೇಹಿತೆ ಮೇಲೆ ಗ್ಯಾಂಗ್‌ರೇಪ್‌