ನವದೆಹಲಿ: ಇಸ್ರೇಲಿ ರಾಯಭಾರಿ ಕಚೇರಿ ಬಳಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿದ ನಂತರ, ದಿಲ್ಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೃಥ್ವಿರಾಜ್ ರಸ್ತೆಯಲ್ಲಿರುವ ಪ್ಲಾಟ್ ಸಂಖ್ಯೆ 4, ನಂದಾಸ್ ಹೌಸ್ ಮತ್ತು ಸೆಂಟ್ರಲ್ ಹಿಂದಿ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಪ್ಲಾಟ್ ಸಂಖ್ಯೆ 2 ಎ ನಲ್ಲಿರುವ ಮನೆಯ ಗಡಿ ಗೋಡೆಗಳ ನಡುವಿನ ಪ್ರದೇಶದಲ್ಲಿ ಸ್ಪೋಟ ಸಂಭವಿಸಿತ್ತು. ಈ ಪ್ರದೇಶದಲ್ಲಿ ಪೆಪೊದೆಗಳು, ಗಿಡಗಳು ಮತ್ತು ಮರಗಳು ಮತ್ತು ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದರಿಂದ ಆರೋಪಿಗಳ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.
ಇದು ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಹಿಂದೆ, ಪೃಥ್ವಿರಾಜ್ ರಸ್ತೆಗೆ ಸಮಾನಾಂತರವಾಗಿ ಚಲಿಸುತ್ತದೆ. ಸ್ಪೋಟದ ಸ್ಥಳದ ಬಳಿ ಪೊಲೀಸರು ಇಸ್ರೇಲಿ ರಾಯಭಾರಿಯನ್ನು ಉದ್ದೇಶಿಸಿ ನಿಂದನೀಯ ಪತ್ರವನ್ನು ಕಂಡುಕೊಂಡಿದ್ದಾರೆ.