ಪಾಟ್ನಾದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. 9 ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕರ ಪೈಕಿ ಎಂಟು ಮಂದಿಯನ್ನು ದೋಷಿ ಎಂದು ಘೋಷಿಸಲಾಗಿತ್ತು. ಬಿಹಾರದಲ್ಲಿ ಎನ್‌ಐಎ ನಡೆಸಿದ ಮೊದಲ ಪ್ರಕರಣ ಇದಾಗಿದ್ದು, ಆರೋಪಿಗಳು ನ್ಯಾಯಾಲಯದಲ್ಲಿ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದರು.
ಅಹ್ಮದ್ ಅಲಿ ಅಲಿಯಾಸ್ ಕಾಲು, ನೂರ್ ಆಲಂ ಮೊಮಿನ್, ಮೊಹಮ್ಮದ್ ಆದಿಲ್ ಶೇಖ್, ಅಬ್ದುಲ್ ಕರೀಂ, ಮುಸ್ತಾಫಿಜುರ್ ರೆಹಮಾನ್, ಆರಿಫ್ ಹುಸೇನ್, ಮೊಹಮ್ಮದ್ ಪೈಗಂಬರ್ ಶೇಖ್ ಮತ್ತು ದಿಲಾವರ್ ಹೊಸೈನ್ ಅವರ ತಪ್ಪೊಪ್ಪಿಗೆ ಆಧಾರದ ಮೇಲೆ ಶಿಕ್ಷೆ ಪ್ರಕಟಿಸಲಾಗಿದೆ.