Thursday, 14th November 2024

ಬಾಲಿವುಡ್ ನಟಿ ಐಶ್ವರ್ಯ ರೈಗೆ ಇ.ಡಿ ಸಮನ್ಸ್

Aishwarya Rai

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯ ರೈಗೆ ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಇ.ಡಿ ಸಮನ್ಸ್ ನೀಡಿದೆ.

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಹೆಸರು ಬಹಿರಂಗವಾಗಿದೆ. ಪ್ರಕರಣದಲ್ಲಿ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಇದೀಗ ಬಾಲಿವುಡ್ ನಟಿ ಐಶ್ವರ್ಯ ರೈಗೆ ಇಡಿ ಸಮನ್ಸ್ ಜಾರಿ ಮಾಡಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ, ನಟಿ ಐಶ್ವರ್ಯ ರೈ ಪ್ರಕರಣ ಕುರಿತಂತೆ ಇಡಿ ವಿಚಾರಣೆ ಮುಂದೂಡಲು ಕೋರಿದ್ದಾರೆ. ಆ ಪ್ರಕಾರ, ಸಂಸ್ಥೆ ಹೊಸ ದಿನಾಂಕ ನೀಡುವ ಸಾಧ್ಯತೆಯಿದೆ.