Wednesday, 11th December 2024

ಸಿಪಿಐ(ಎಂ)ನ ಪ್ರಧಾನ ಕಚೇರಿ ಮೇಲೆ ಬಾಂಬ್ ದಾಳಿ

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಆಡಳಿತಾ ರೂಢ ಸಿಪಿಐ(ಎಂ)ನ ಪ್ರಧಾನ ಕಚೇರಿ ಮೇಲೆ ಬೈಕ್ ನಲ್ಲಿ ಬಂದ ವ್ಯಕ್ತಿ ಬಾಂಬ್ ಎಸೆದ ಘಟನೆಯ ನಂತರ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವುದಾಗಿ ವರದಿ ಯಾಗಿದೆ.

ಈ ಘಟನೆಯಿಂದ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರದ ಕಿಡಿ ಹೊತ್ತಿಕೊಂಡಿದೆ. ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯ ವಯನಾಡ್ ಕಚೇರಿಯನ್ನು ಧ್ವಂಸಗೊಳಿಸಿದ ನಂತರ ಎರಡು ಪಕ್ಷಗಳ ಮುಖಂಡರು ವಾಕ್ಸಮರದಲ್ಲಿ ತೊಡಗಿರುವುದಾಗಿ ವರದಿ ವಿವರಿಸಿದೆ.

ತಿರುವನಂತಪುರಂನಲ್ಲಿರುವ ಸಿಪಿಐಎಂ ಕಚೇರಿ ಮೇಲೆ ಬಾಂಬ್ ಎಸೆದ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬ ಸ್ಕೂಟರ್ ನಲ್ಲಿ ಆಗಮಿಸಿದ್ದು, ಎ.ಕೆ.ಗೋಪಾಲನ್ ಸೆಂಟರ್ ಬಳಿ ಸಮೀಪ ಇದ್ದ ಕೇಂದ್ರ ಕಚೇರಿ ಮೇಲೆ ಬಾಂಬ್ ಎಸೆದಿರುವುದು ಸೆರೆ ಯಾಗಿತ್ತು ಎಂದು ವರದಿ ತಿಳಿಸಿದೆ.