Wednesday, 11th December 2024

ನಾಗ್ಪುರ ಪೀಠದ ನ್ಯಾಯಮೂರ್ತಿ ಹಠಾತ್ ರಾಜೀನಾಮೆ

bombay high court

ನಾಗ್ಪುರ: ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ರೋಹಿತ್ ಬಿ ದೇವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಶುಕ್ರವಾರ ನ್ಯಾಯಾಲಯದ ಅಧಿವೇಶನ ನಡೆಯುತ್ತಿರುವಾಗ ಹಠಾತ್ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದಾಗಿ ನ್ಯಾಯಾಲಯದಲ್ಲಿ ಹಾಜರಿದ್ದವರೆಲ್ಲ ಮೂಕವಿಸ್ಮಿತರಾಗಿದ್ದಾರೆ.

ರಾಜೀನಾಮೆ ನೀಡುವುದಾಗಿ ಘೋಷಿಸಿದ ಅವರು, ‘ಇಂದು ಈ ನ್ಯಾಯಾಲಯದಲ್ಲಿ ಹಾಜರಿದ್ದ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ’ ಎಂದರು.

‘ನೀವೆಲ್ಲರೂ ನನಗೆ ಕುಟುಂಬದವರ ಸಮಾನ. ಯಾರನ್ನೂ ನೋಯಿಸಲು ಬಯಸುವುದಿಲ್ಲ, ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಈ ವಿಷಯ ತಿಳಿಸಲು ನನಗೆ ತುಂಬಾ ವಿಷಾದ ಅನ್ನಿಸುತ್ತಿದೆ. ಸ್ವಾಭಿಮಾನದ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಜೀನಾಮೆ ನೀಡಿದ್ದೇನೆ’ ಎಂದು ನ್ಯಾಯಮೂರ್ತಿ ರೋಹಿತ್ ದೇವ್ ಹೇಳಿದ್ದಾರೆ.