Sunday, 6th October 2024

ಭಾರತ ಗಡಿ ಪ್ರವೇಶಿಸುತ್ತಿದ್ದ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಚಂಡೀಗಢ: ಪಂಜಾಬ್‌ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತ ಗಡಿ ಪ್ರವೇಶಿಸುತ್ತಿದ್ದ ಡ್ರೋನ್‌ ಅನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಅಮೃತಸರ ಸೆಕ್ಟರ್‌ನ 22ರಲ್ಲಿ ಪ್ರವೇಶಿಸುತ್ತಿದ್ದ ಡ್ರೋನ್‌ವೊಂದನ್ನು ಬಿಎಸ್‌ಎಫ್‌ ಸಿಬ್ಬಂದಿ ಹೊಡೆದು ರುಳಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಮೃತಸರದ ದಾವೊಕೆ ಸೇನಾ ನೆಲೆ ಬಳಿ ಡ್ರೋನ್‌ ಹೊಡೆದುರುಳಿಸಲಾಯಿತು. ಅದು ಪಾಕಿಸ್ತಾನದ ಗಡಿ ಒಳಗೆ ಬಿದ್ದಿತು. ಪಾಕಿಸ್ತಾನಿ ಸೈನಿಕರು ಅದನ್ನು ತೆಗೆದುಕೊಂಡು ಹೋದರು. ಡ್ರೋನ್‌ ಹಾರಾಡಿದ ಪ್ರದೇಶದಲ್ಲಿ ಪರಿಶೀಲಿಸಿದಾಗ ಭಾರೊಪಾಲ್‌ ಗ್ರಾಮದ ಗಡಿಯಲ್ಲಿ 4.3 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ.

ಭಾರತ-ಪಾಕಿಸ್ತಾನ ಅಂತರ ರಾಷ್ಟ್ರೀಯ ಗಡಿಯ ಗಟ್ಟಿ ಅಜೈಬ್‌ ಸಿಂಗ್‌ ಗ್ರಾಮದ ಕೃಷಿ ಭೂಮಿಯಲ್ಲಿ 25 ಕಿಲೋಗ್ರಾಂ ಶಂಕಿತ ಹೆರಾಯಿನ್‌ನನ್ನು ಬಿಎಸ್‌ಎಫ್‌ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದರು.

Read E-Paper click here